ಚೈಲ್ಡ್ ಲೈನ್ 1098: ಅರಿವು ಕಾರ್ಯಕ್ರಮ

ಬೀದರ,ಮಾ 28: ನಗರದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ
ಅಡಿಯ ಮಕ್ಕಳ ಸಹಾಯವಾಣಿ ಕೇಂದ್ರದಿಂದ ಗಾದಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವಶಿಕ್ಷಣ ಬಲವರ್ಧನೆ ತರಬೇತಿ ಕಾರ್ಯಗಾರದಲ್ಲಿ ಚೈಲ್ಡ್ ಲೈನ್ 1098ಕುರಿತು ಅಂಗನವಾಡಿ ಸಹಾಯಕಿಯರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಾನ್ಸನ್ ಕರಂಜಿಕರ್ ಮಾತನಾಡಿ,ಮಕ್ಕಳ ಸಹಾಯವಾಣಿ 1098 ಕರೆ ಇದು ಭಾರತದ ಯಾವುದೇ ದೂರವಾಣಿ ಸೇವೆಯಿಂದ ಸಾರ್ವಜನಿಕರು ಮಕ್ಕಳ ರಕ್ಷಣೆಯಲ್ಲಿ ಪಾತ್ರರಾಗಿರಿ ಚೈಲ್ಡಲೈನ್ ರಾಷ್ಟ್ರೀಯ 24 ಗಂಟೆಗಳ ಉಚಿತ ಮತ್ತು ರಕ್ಷಣೆಯ ಅವಶ್ಯಕತೆ ಇರುವ ಮಕ್ಕಳಿಗಾಗಿ
ಒದಗಿಸಲಾಗುವ ದೂರವಾಣಿ ತುರ್ತು ಸಂಪರ್ಕ ಸೇವೆಯಾಗಿದೆ ಎಂದರು.
ಅವಿನಾಶ ಬೇವಿನದೊಡ್ಡಿ ಬಾಲ್ಯವಿವಾಹ ಕುರಿತು ಮಾತನಾಡಿದರು.ನಿಮ್ಮ
ಗ್ರಾಮಗಳಲ್ಲಿ ಅಥವಾ ಪಂಚಾಯತ್‍ಗಳಲ್ಲಿ , ಏರಿಯಾಗಳಲ್ಲಿ ಬಾಲ್ಯವಿವಾಹ
ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೆ ಬಂದರೆ
ತಕ್ಷಣವೆ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು