ಚೈಲ್ಡ್ ಲೈನ್ ಘಟಕದಿಂದ ಆಹಾರ ಕಿಟ್ ವಿತರಣೆ

ಕಲಬುರಗಿ,ಮೇ. 27: ವಾಡಿ ರೈಲ್ವೆ ಚೈಲ್ಡ್ ಲೈನ್-1098 ಘಟಕದಿಂದ ಇತ್ತೀಚೆಗೆ ವಾಡಿ ಪಟ್ಣದ ಡಾ.ಭೀಮರಾಬ ಅಂಬೇಡ್ಕರ ಕಾಲೋನಿಯಲ್ಲಿ 10 ಅಂಗವಿಕಲ ಹಾಗೂ ನಿರ್ಗತಿಕ ಮಕ್ಕಳಿಗೆ ಒಂದು ತಿಂಗಳವರೆಗೆ ಆಗುವ ಆಹಾರಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಮಕ್ಕಳ ಸಹಾಯವಾಣಿ ಸಂಯೋಜಕ ಕೃಷ್ಣ, ಕೌನ್ಸಿಲರ್ ಉಷಾ ಹಾಗೂ ಸ್ವಯಂ ಸೇವಕ ಕಲ್ಲಿನಾಥ ತಳಕೇರಿ ಅವರು ಕಿಟ್ ವಿತರಿಸಿದರು.