ಚೈತ್ರ ಕವಿ-ಕಾವ್ಯ ಗೋಷ್ಠಿಗೆ ಚಾಲನೆ

ಸೇಡಂ, ಎ,16: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಲ್ಲಿಂದು “ಚೈತ್ರದ ಚಿಗುರು ಕಾವ್ಯದ ಉಸಿರು” ಸಮ ಸಾಹಿತ್ಯ ವೇದಿಕೆಯ
ದಶವಾರ್ಷಿಕ ಉತ್ಸವ 2013-2023
ಚೈತ್ರ ಕವಿ-ಕಾವ್ಯ ಗೋಷ್ಠಿಯ ಕಾರ್ಯಕ್ರಮಕ್ಕೆ ರಾಜಯೋಗಿನಿ ಬ್ರಹ್ಮಕುಮಾರಿ ಕಲಾವತಿ ಅಮ್ಮನವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಡಾ. ಬಿ.ಆರ್.ಅಣ್ಣಾಸಾಗರ ಅತಿಥಿಗಳಾಗಿ ಡಾ.ವೆಂಕಟೇಶ್ವರ ಕೆ ಕೊಲ್ಲಿ,ಶ್ರೀಧರ ಇನಾಮದಾರ, ಶರಣಪ್ಪ ಮಹಾಗಾಂವ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಲಿಂಗರೆಡ್ಡಿ ಶೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು.