ಚೈತ್ರಾ ಕೈದಿ ನಂಬರ್ 9737

ಬೆಂಗಳೂರು,ಸೆ.೨೪-ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಂತರ ರೂ ವಂಚನೆ ಪ್ರಕರಣದ ಚೈತ್ರಾ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಆರೋಪಿಗಳಿಗೆ ಕೈದಿ ನಂಬರ್ ನೀಡಿದ್ದಾರೆ.
ಪ್ರಕರಣದ ಮೊದಲ ಆರೋಪಿ ಚೈತ್ರಾಗೆ ೯೭೩೭ ನೇ ನಂಬರ್ ನೀಡಿದ್ದರೆ, ಇನ್ನುಳಿದ ಆರೋಪಿಗಳಾದ ಮೋಹನ್ ಕುಮಾರ್ ಕೈದಿ ನಂಬರ್ ೯೭೩೮, ರಮೇಶ್-೯೭೩೯ ಚೆನ್ನಾನಾಯ್ಕ-೯೭೪೦, ಧನರಾಜ್-೯೭೪೧ ಎಂದು ವಿಚಾರಣಾಧೀನ ನಂಬರ್ ನೀಡಲಾಗಿದೆ.
ಗೋವಿಂದ ಬಾಬು ಪೂಜಾರಿಗೆ ೫ ಕೋಟಿ ವಂಚನೆ ಕೇಸ್‌ನಲ್ಲಿ ಸಿಲುಕಿದ್ದ ಚೈತ್ರಾ ಗ್ಯಾಂಗ್‌ನ್ನು ಸಿಸಿಬಿ ಪೊಲೀಸರು ೧೦ ದಿನಗಳಿಂದ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಆದರೆ ನಿನ್ನೆ ಕಸ್ಟಡಿ ಅಂತ್ಯವಾಗಿದ್ದರಿಂದ ೩ನೇ ಎಸಿಎಂಎಂ ಕೋರ್ಟ್‌ಗೆ ವಂಚಕರ ಗ್ಯಾಂಗ್?ನ್ನ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು.
ನ್ಯಾಯಾಲಯವೂ ಚೈತ್ರಾ ಹಾಗೂ ಆಕೆಯ ಗ್ಯಾಂಗ್‌ನ ಗಗನ್ ಕಡೂರ್, ಧನರಾಜ್, ರಮೇಶ್, ಶ್ರೀಕಾಂತ್ ಮತ್ತು ಚೆನ್ನನಾಯ್‌ಗೆ ೧೪ ದಿನಗಳು ಅಂದರೆ ಅಕ್ಟೋಬರ್ ೬ ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಂತರ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇನ್ನು ವಂಚನೆ ಕೇಸ್‌ನಲ್ಲಿ ಮೂರನೇ ಆರೋಪಿ ಹಾಲಶ್ರೀಗೆ ಸಂಕಷ್ಟ ಶುರುವಾಗಿದೆ. ಏಕೆಂದರೆ, ವಂಚನೆ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದ್ರೆ, ಹಾಲಶ್ರೀಯನ್ನು ಮಾತ್ರ ಸೆಪ್ಟೆಂಬರ್೨೯ ರವರೆಗೆ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ.
ಕಣ್ಣೀರಿನಲ್ಲಿ ಚೈತ್ರಾ:
ಪರಪ್ಪನ ಅಗ್ರಾಹರ ಜೈಲಿನಲ್ಲಿ ಚೈತ್ರಾ, ನಿದ್ದೆ ಇಲ್ಲದೇ ಚಿಂತೆಯಲ್ಲೇ ಕಣ್ಣೀರಿನಲ್ಲಿ ರಾತ್ರಿ ಕಳೆದಿದ್ದಾಳೆ. ನಿನ್ನೆ ಸಂಜೆ ೬ ಗಂಟೆ ಸುಮಾರಿಗೆ ಜೈಲು ಪ್ರವೇಶಿಸಿದ್ದ ಚೈತ್ರಾ ಮತ್ತವಳ ಗ್ಯಾಂಗ್, ಪರಪ್ಪನ ಅಗ್ರಹಾರ ಜೈಲಿನ ಹೊಸ ಬಂದಿಖಾನೆಯಲ್ಲಿದೆ.
ಆದರೆ ಚೈತ್ರಾಳನ್ನು ಪ್ರತ್ಯೇಕ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ನಿನ್ನೆ ರಾತ್ರಿ ಸಿಬ್ಬಂದಿಗಳು ನೀಡಿದ ಚಪಾತಿ, ಅನ್ನ-ಸಾಂಬರ್ ಸೇವಿಸಿದ ಚೈತ್ರಾ ಇಂದ ಬೆಳಿಗ್ಗೆ ಜೈಲು ಸಿಬ್ಬಂದಿಗಳು ನೀಡಿ ಪಲಾವ್ ಸೇವಿಸಿದ್ದಾಳೆ. ಇನ್ನು ೯ ದಿನ ಹೊಸ ಬಂಧಿಖಾನೆಯಲ್ಲೇ ಉಳಿಯಲಿರುವ ಚೈತ್ರಾಳನ್ನು ಬಳಿಕ ಹಳೆ ಬಂಧಿಖಾನೆಗೆ ಶಿಫ್ಟ್ ಮಾಡಲಾಗುತ್ತದೆ.