ಚೈತನ್ಯ ಕಾಲೇಜಿನಿಂದ ಶಿಕ್ಷಣ ಇಲಾಖೆಗೇ ವಂಚನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,7- ನಗರದಲ್ಲಿ ಈ ವರ್ಷದಿಂದ ಆರಂಭಗೊಂಡಿರುವ ವಿಜಯವಾಡಾಸ್  ಶ್ರೀಚೈತನ್ಯ ಪಿಯು ಕಾಲೇಜ್.  ತಾನು ಆರಂಭಿಸಿರುವ ಕಾಲೇಜಿನ ಮಾಹಿತಿಯನ್ನು ನೀಡುವಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ವಂಚನೆ ಮಾಡಿರುವುದ ಬೆಳಕಿಗೆ ಬಂದಿದೆ.
ನಗರದ ಹವಂಬಾವಿ ಪ್ರದೇಶದಲ್ಲಿನ  ಶ್ರೀಚೈತನ್ಯ ಟೆಕ್ನೋ ಶಾಲೆಯ ಕಟ್ಟಡವನ್ನು ತೋರಿಸಿ. ಈ ಬಗೆಗಿನ ದಾಖಲೆ ಒದಗಿಸಿ, ಕಚೇರಿ, ತರಗತಿಗಳ ಕೊಠಡಿ, ಲ್ಯಾಬ್ ಗಳಿರುವ ಬಗ್ಗೆ ನೀಡಿದ್ದಾರೆ.
ಆದರೆ ವಾಸ್ತವದಲ್ಲಿ ಅವರು ಸಿರುಗುಪ್ಪ ರಸ್ತೆಯ ಹೊರ ವಲಯದಲ್ಲಿರುವ ಬ್ರಿಲಿಯಂಟ್ ಶಾಲೆಯ ಆವರಣದಲ್ಲಿ ಕಾಲೇಜು ನಡೆಸುತ್ತಿದ್ದಾರೆ.
ಈ ಬಗ್ಗೆ ನವ ಕರ್ನಾಟಕ ಯುವಕ ಸಂಘ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿಯ  ಸಿದ್ಮಲ್ ಮಂಜುನಾಥ್, ದೇವೇಶ್ ಮೊದಲಾದವರು  ಪದವಿ ಪೂರ್ವ ಶಿಕ್ಷಣ ಇಲಾಖೆಗೆ ದೂರು ನೀಡಿ, ಅಗತ್ಯ ಕಟ್ಟಡ ಇಲ್ಲದೆ. ಒಂದು ಕಡೆ ಸ್ಥಳ, ಕಟ್ಟಡ ತೋರಿಸಿ, ಮತ್ತೊಂದು ಕಡೆ ಕಾಲೇಜು ನಡೆಸುತ್ತಿರುವ ಕಾಲೇಜುಗಳ  ಇಲಾಖೆಗೆ ವಂಚನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಇಲಾಖೆಯ ಉಪ ನಿರ್ದೇಶಕರಿಗೆ  ಮನವಿ ಮಾಡಿದ್ದರು.
ಈ ದೂರನ್ನು ಆಧರಿಸಿದ ಉಪ ನಿರ್ದೇಶಕ ಗಿರೀಶ್ ಅವರು ಕಾಲೇಜಿನವರು ನೀಡಿದ ವಿಳಾಸಕ್ಕೆ  ಕಳೆದ ಜುಲ್್ 11 ಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ದಂಗಾಗಿದ್ದಾರೆ.
ಅಲ್ಲಿ ವಿಜಯವಾಡ ಶ್ರೀ ಚೈತನ್ಯ ಕಾಲೇಜಿನ ಕಚೇರಿ ಇಲ್ಲ. ತರಗತಿಗಳೂ ನಡೆಯುತ್ತಿಲ್ಲ. ಲ್ಯಾಬ್ ಗಳು ಇಲ್ಲವೆಂದು. ಅಲ್ಲಿ ನಡೆಯುತ್ತಿರುವುದು ಶ್ರೀ ಚೈತನ್ಯ ಟೆಕ್ನೋ ಶಾಲೆ ಎಂಬುದು ಸಾಕ್ಷಿ ಸಮೇತ ದಾಖಲಿಸಿದ್ದಾರೆ.
ಈ ಬಗ್ಗೆ ವಿವಿರಣೆ ನೀಡುವಂತೆ ಕಾಲೇಜಿಗೆ ನೋಟೀಸ್ ನೀಡಿದರೂ ಸೂಕ್ತ ಉತ್ತರ ನೀಡದ ಕಾರಣ ಈ ಬಗ್ಗೆ ಇಲಾಖೆಯ ಆಯುಕ್ತರು, ನಿರ್ದೇಶಕರಿಗೆ ಉಪ ನಿರ್ದೇಶಕರು ದೂರು ನೀಡಿದ್ದಾರಂತೆ.
ಚೈತನ್ಯ ಶಾಲೆ ಮತ್ತು‌ಕಾಲೇಜು ಒಂದೇ ಸಂಸ್ಥೆಯವುಗಳಾಗಿರುವುದರಿಂದ ಒಂದನ್ನು ತೋರಿಸಿ ಮತ್ತೊಂದಕ್ಕೆ ಅನುಮತಿ ಪಡೆಯುವ ವಂಚನೆ ಕಾರ್ಯ ನಡೆದಿದೆ ಎನ್ನಬಹದು.
ಇದೇ ರೀತಿ ಇನ್ನೆರೆಡು ಕಾಲೇಜುಗಳು ಸಹ ಒಂದು ಕಡೆ ವಿಳಾಸ,ಕಟ್ಟಡ ತೋರಿಸಿ. ಮತ್ತೊಂದು‌ ಕಡೆ ನಡೆಸುತ್ತಿರುವ ಬಗ್ಗೆ ಸಹ ದೂರುಗಳಿವೆಯಂತೆ.

ಕೋಟ್:
ವಿಜಯವಾಡ ಶ್ರೀ ಚೈತನ್ಯ ಕಾಲೇಜು. ಬಳ್ಳಾರಿಯಲ್ಲಿ ನೀಡಿದ ವಿಳಾಸದಲ್ಲಿ ನಡೆಯುತ್ತಿಲ್ಲ. ಅಲ್ಲಿ ಶಾಲೆ ನಡೆಯುತ್ತಿದೆ. ಈ ಬಗ್ಗೆ ತಪ್ಪು ಮಾಹಿತಿ ನೀಡಿ ವಂಚನೆ ಮಾಡಿರುವ ಬಗ್ಗೆ ಇಲಾಖೆಯ ನಿರ್ದೇಶಕರಿಗೆ ಮಾಹಿತಿ‌ನೀಡಿದೆ. ಅವರ ಮಾರ್ಗದರ್ಶನದಂತೆ ಮುಂದಿನ‌ಕ್ರಮ‌ ಜರುಗಿಸಲಿದೆ.
ಎಂ.ಟಿ.ಗಿರೀಶ್, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕರು,ಬಳ್ಳಾರಿ.