
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.18: ತಾಲ್ಲೂಕಿನ ಸುಕ್ಷೇತ್ರ ಚೇಳ್ಳಗುರ್ಕಿಯ ಪವಾಡ ಪುರುಷ ಶ್ರೀ ಎರ್ರಿತಾತನವರ ಮಠದಲ್ಲಿ ಶತಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಇಂದಿನಿಂದ ಸಪ್ತ ಭಜನೆ ಆರಂಭವಾಯಿತು. ಆರಂಭದಲ್ಲಿ ಸ್ಥಳೀಯ ಯುವಕರು ಹಾಗೂ ಹಿರಿಯರು ತಾತನಿಗೆ ಪೂಜೆಸಲ್ಲಿಸಿ, ಓಂ ನಮಃ ಶಿವಾಯ ಮಂತ್ರದೊಂದಿಗೆ ಭಕ್ತಿ ಸಮರ್ಪಿಸಿದರು.ಮೊದಲೇ ದಿನ ಚೇಳ್ಳಗುರ್ಕಿ, ಡೊಣೇಕಲ್ಲು,ಅಮರಾಪುರ ಹಾಗೂ ವೈ.ಕಗ್ಗಲ್ಲು ಗ್ರಾಮದವರು ಪಾಲ್ಗೊಂಡಿದ್ದರು.ಏಳುದಿನಗಳ ಕಾಲ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಒಟ್ಟು ಇಪ್ಪತ್ತೆಂಟು ಗ್ರಾಮದವರು ಪಾಲ್ಗೊಳ್ಳುವರು ಎಂದು ಸಂಘಟಕರು ತಿಳಿಸಿದ್ದಾರೆ.
One attachment • Scanned by Gmail