ಕೊಲೊಂಬೋ,ಜೂ.೨- ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
ದೇಶದಲ್ಲಿ ಶೇ.೭೦ರಷ್ಟು ಏರಿಕೆ ಕಂಡಿದ್ದ ಹಣದುಬ್ಬರ ಈಗ ಶೇ.೨೫.೨ಕ್ಕೆ ಇಳಿದಿದೆ. ಆರ್ಥಿಕತೆ ಸುಧಾರಣೆ ಹಾದಿಯಲ್ಲಿ ಸಾಗಿದೆ ಇದು ಆಶಾದಾಯ ಬೆಳವಣಿಗೆ ಎಂದಿದ್ದಾರೆ.
“ಇಂದು ನಾವೆಲ್ಲರೂ ಕೇಂದ್ರೀಕೃತ ನೀತಿಗಳ ಫಲಿತಾಂಶಗಳಿಂದ ಪ್ರಯೋಜನ ಪಡೆಯುತ್ತಿದ್ದೇವೆ. ಶೇ.೭೦ ಕ್ಕೆ ಏರಿದ ಹಣದುಬ್ಬರ ಶೇ. ೨೫.೨ಕ್ಕೆ ಇಳಿದಿದೆ. ಈ ಕಾರಣದಿಂದಾಗಿ ಜೀವನ ವೆಚ್ಚ ಕ್ರಮೇಣ ಕಡಿಮೆಯಾಗುತ್ತಿದೆ. ಇಡೀ ಸಮಾಜ ಇದರ ಲಾಭ ಪಡೆಯಲು ಸಹಕಾರಿಯಾಗಲಿದೆ ಎಂದಿದ್ಧಾರೆ.
ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್, ಹಿಂದಿನ ದಿನ, ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸುವ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದೆ ಶ್ರೀಲಂಕಾದ ಕೆಟ್ಟ ಆರ್ಥಿಕ ಬಿಕ್ಕಟ್ಟು ಮುಗಿದಿದೆ ಎಂಬುದರ ಸಂಕೇತವಾಗಿದೆ ಎಂದಿದ್ದಾರೆ.
ಕಳೆದ ವರ್ಷ ಶ್ರೀಲಂಕಾದ ಆರ್ಥಿಕತೆ ಮತ್ತು ಅದರ ವಿದೇಶಿ ವಿನಿಮಯ ಮೀಸಲು ಮುಗಿದ ನಂತರ ಹಿಂದೆಂದೂ ಕಂಡು ಕೇಳರಿಯದ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿತು. ಆಹಾರ ಮತ್ತು ಇಂಧನದ ಬೆಲೆಗಳು ಗಗನಕ್ಕೇರಿದವು ಮತ್ತು ಸಾವಿರಾರು ಜನರ ಪ್ರತಿಭಟನಾ ಗುಂಪುಗಳು ಆಗಿನ ಅಧ್ಯಕ್ಷರು ರಾಜೀನಾಮೆ ನೀಡಲು ಮತ್ತು ದೇಶದಿಂದ ಪಲಾಯನ ಮಾಡಲು ಕಾರಣವಾಗಿತ್ತು.
ಆರ್ಥಿಕ ಬಿಕ್ಕಟ್ಟಿನ ನಡವೆಯೂ ಕಳೆದ ವರ್ಷ ಜುಲೈನಲ್ಲಿ ರನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡರು ಮತ್ತು ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ೨.೯ ಶತಕೋಟಿ ಡಾಲರ್ ಬೇಲ್‌ಔಟ್‌ಗೆ ಮಾತುಕತೆ ನಡೆಸಿದ್ದರು. ಆ ನಂತರ ಒಂದು ವರ್ಷದ ನಂತರ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿದಿದೆ.
ಸೆಪ್ಟೆಂಬರ್‌ನಲ್ಲಿ ಸುಮಾರು ಶೇ.೭೦ರಷ್ಟು ನಷ್ಟು ದಾಖಲೆಯ ಗರಿಷ್ಠ ಮಟ್ಟ ತಲುಪಿದ ಹಣದುಬ್ಬರ ಕಡಿಮೆಯಾಗುತ್ತಿದೆ, ಸರ್ಕಾರದ ಆದಾಯ ಹೆಚ್ಚುತ್ತಿದೆ ಮತ್ತು ದೇಶದ ಪಾವತಿಗಳ ಸಮತೋಲನದ ಮೇಲಿನ ಒತ್ತಡ ಸರಾಗವಾಗುತ್ತಿದೆ ಎಂದು ಹೇಳಲಾಗಿದೆ.