
ವಿಜಯಪುರ: ಮಾ.29:ನಗರದ ಚೇತನಾ ಶಿಕ್ಷಣ ಸಂಸ್ಥೆಯ ಚೇತನಾ ಪಿಯು ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ಫಬ್ರುವರಿ ತಿಂಗಳಲ್ಲಿ ಹಮ್ಮಿಕೊಂಡ ಚೇತನಾ ಸಾಮಥ್ರ್ಯ ಸ್ಪರ್ಧೆಯ ಪ್ರತಿಭಾ ಅನ್ವೇಷಣೆ ಪರೀಕ್ಷೆಯಲ್ಲಿ ಟಾಪ್ 5 ರ್ಯಾಂಕ್ ಅನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಇಂದು ನಗರದ ಚೇತನಾ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನಿಪ ಅಧ್ಯಕ್ಷ ಶ್ರೀ ಸಂಗಮೇಶ ಚೂರಿ ಮಾತನಾಡಿದರು.
ಪ್ರತಿಭಾವಂತರನ್ನು ಗುರುತಿಸಿಅವರ ಪ್ರತಿಭೆಗೆ ಒಂದು ವೇದಿಕೆಯನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ತುಂಬಿದ್ದು ಅಷ್ಟೇ ಅಲ್ಲದೇ ಟಾಪ್ 5 ರ್ಯಾಂಕ್ ಅನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಚೇತನಾ ಕಾಲೇಜಿನ ಕಾರ್ಯ ಶ್ಲಾಘನೀಯ ಇಂಥ ಕಾರ್ಯ ಇತರ ಕಾಲೇಜಿನವರಿಗೂ ಮಾದರಿ ಎಂದರು.
ಪ್ರಥಮ ಸ್ಥಾನವನ್ನು ಪಡೆದುಕೊಂಡ ಕಾಖಂಡಕಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಲಕ್ಷ್ಮೀ ರೇವಪ್ಪಗೊಳ 25 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾಳೆ. ವಿಜಯಪುರ ನಗರದ ಶ್ಯಾಮ್ಸ ಸ್ಕೂಲ ವಿದ್ಯಾರ್ಥಿಯಾದ ಅರುಣಗೌಡ ಪಾಟೀಲ ದ್ವಿತೀಯ ಸ್ಥಾನ 20 ಸಾವಿರ ನಗದು ಬಹುಮಾನ, ತಾಳಿಕೋಟಿಯ ಬ್ರಿಲಿಯಂಟ್ ಸ್ಕೂಲ ವಿದ್ಯಾರ್ಥಿ ಸಂಪತ್‍ಕುಮಾರ ಹುಗ್ಗಿ ತೃತೀಯ ಸ್ಥಾನ 15 ಸಾವಿರ ನಗದು ಬಹುಮಾನ, ತಾಳಿಕೋಟಿಯ ಬ್ರಿಲಿಯಂಟ್ ಸ್ಕೂಲ ವಿದ್ಯಾರ್ಥಿನಿ ಶ್ರೇಯಾ ಎಸ್ ಪಾಟೀಲ ನಾಲ್ಕನೇಯ ಸ್ಥಾನ 10 ಸಾವಿರ ನಗದು ಬಹುಮಾನ ಹಾಗೂ ಕಗ್ಗೋಡ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರಕ್ಷಿತಾ ಸಿಕೆದ ಐದನೇಯ ಸ್ಥಾನ 5 ಸಾವಿರ ನಗದು ಬಹುಮಾನ ಪಡೆಕೊಂಡಿದ್ದಾರೆ. ನಗದು ಬಹುಮಾನವನ್ನು ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ್ದು ಚೇತನಾ ಕಾಲೇಜಿನ ಕಾರ್ಯ ವೈಖರಿ ರಾಜ್ಯಕ್ಕೆ ಮಾದರಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರಲ್ಲಿ ರಾಜ್ಯದಲ್ಲಿಯೇ ಹೆಸರಾಂತ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ಜುಗತಿಯವರು ಬಹುಮಾನ ಪಡೆದುಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು ರಾಜ್ಯದ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾವು ನಡೆಸಿರುವ ಸಾಮಥ್ರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಟಾಪ್ 5 ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದ್ದೇವೆ. ಇನ್ನು ಈ ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡು ಸಾಧನೆಯನ್ನು ಮೆರೆದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿಯೇ ಇಂತಹ ಮಹತ್ತರ ಕಾರ್ಯವನ್ನು ನಮ್ಮ ಸಂಸ್ಥೆ ಹಮ್ಮಿಕೊಂಡಿದೆ. ಅಷ್ಟೇ ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜಿನ ಶುಲ್ಕದಲ್ಲಿ ವಿನಾಯಿತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವಂತ ಕಾರ್ಯವನ್ನು ನಮ್ಮ ಕಾಲೇಜು ನಿರಂತರವಾಗಿ ಮಾಡುತ್ತದೆ ಎಂದರು. ಸ್ನೇಹಾ ಜುಗತಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರಾದ ಡಾ|| ನಾಗರಾಜ ಹೇರಲಗಿ, ಉಪಾಧ್ಯಕ್ಷ ರೋಹಿತ ಜುಗತಿ, ಸಹಾಯಕ ಆಡಳಿತಾಧಿಕಾರಿ ಪ್ರಮೋದ ಕುಕರ್ಣಿ, ಪ್ರಾಚಾರ್ಯ ವಿಶ್ವನಾಥ ದಾಬಡೆ, ಉಪಪ್ರಾಚಾರ್ಯ ಪ್ರೊ. ಜೆ. ಎಮ್ ಜಹಗೀರದಾರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎ. ಎಚ್. ಕೊಳಮಲಿ ಹಾಗೂ ಕಾಲೇಜಿನ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.