ಚೇಗುಂಟಾ ಶ್ರೀ ಪಾರ್ವತಿ ಪರಮೇಶ್ವರರ ಅದ್ಧೂರಿ ರಥೋತ್ಸವ

ಸೈದಾಪುರ:ಎ.3:ಇಲ್ಲಿಗೆ ಸಮೀಪದ ನೆರೆಯ ತೆಲಂಗಾಣ ರಾಜ್ಯದ ಸುಕ್ಷೇತ್ರ ಚೆಗುಂಟಾದಲ್ಲಿ ಶ್ರೀ ಪಾರ್ವತಿ ಪರಮೇಶ್ವರರ ರಥೋತ್ಸವ ಡಾ.ಕ್ಷೀರಲಿಂಗ ಮಹಾಸ್ವಾಮಿಗಳ ನೇತೃದಲ್ಲಿ ಅದ್ಧೂರಿಯಾಗಿ ಜರುಗಿತು. ತೆಲಂಗಾಣ ರಾಜ್ಯದವರು ಸೇರಿದಂತೆ ಯಾದಗಿರಿ, ರಾಯಚೂರು ಜಿಲ್ಲೆಯ ಭಕ್ತಾಧಿಗಳು, ಸುತ್ತಲಿನ ಗ್ರಾಮಸ್ಥರು, ಗಣ್ಯವ್ಯಕ್ತಿಗಳು, ರೈತ ಬಾಂಧವರು, ದೇವಸ್ಥಾನದ ವ್ಯವಸ್ಥಾಪಕರು ಸೇರಿದಂತೆ ಇತರರು ಭಾಗವಹಿಸಿದ್ದರು.