ಚೆಸ್ ಸ್ಪರ್ಧೆಯಲ್ಲಿ ಚಂದನ ಜಿಲ್ಲಾಮಟ್ಟಕ್ಕೆ ಆಯ್ಕೆ

ಸಂಜೆವಾಣಿ ವಾರ್ತೆ

ಹಿರಿಯೂರು.ಆ.2 – ಹಿರಿಯೂರಿನಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ  ಚೆಸ್ ಸ್ಪರ್ಧೆಯಲ್ಲಿ ಜವನಗೊಂಡನಹಳ್ಳಿ ಶ್ರೀ ಶಾರದಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ ಎನ್ ಚಂದನ ವಿಜೇತರಾಗಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿನಿಯು ಜಿಲ್ಲಾ ಮಟ್ಟದಲ್ಲಿ ಯಶಸ್ವಿಗಳಿಸಿ ರಾಜ್ಯಮಟ್ಟದಲ್ಲೂ ಜಯಗಳಿಸಲಿ ಎಂದು ಶಾಲಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ಉಪಾಧ್ಯಕ್ಷರಾದ ಎಚ್ ಆರ್ ತುಳಸಿ ಕುಮಾರ್ ಹಾಗೂ ಮುಖ್ಯ ಶಿಕ್ಷಕ ಎ ರಾಕೇಶ್ ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.