ಚೆಸ್ ಟೂರ್ನಮೆಂಟ್ ಮೇ 27 ರಿಂದ

ಬೀದರ್:ಮೇ.21: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ನಗರದ ಐ.ಎಂ.ಎ ಹಾಲ್‍ನಲ್ಲಿ ಮೇ 27 ಮತ್ತು 28 ರಂದು ಚೆಸ್ ಟೂರ್ನಮೆಂಟ್ ಹಮ್ಮಿಕೊಂಡಿದೆ.

8 ರಿಂದ 12 ವರ್ಷ, 12 ರಿಂದ 15 ವರ್ಷ ಹಾಗೂ 15 ರಿಂದ 18 ವರ್ಷದ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಟೂರ್ನಮೆಂಟ್ ನಡೆಯಲಿದೆ.

ಮೂರೂ ವಿಭಾಗಗಳ ವಿಜೇತರು ರೂ. 3 ಸಾವಿರ ಪ್ರಥಮ, ರೂ. 2 ಸಾವಿರ ದ್ವಿತೀಯ ಹಾಗೂ ರೂ. 1 ಸಾವಿರ ತೃತೀಯ ಬಹುಮಾನ ಪಡೆಯಲಿದ್ದಾರೆ. ಸಮಗ್ರ ಚಾಂಪಿಯನ್ ರೂ. 5 ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನರಾಗಲಿದ್ದಾರೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ನಿತಿನ್ ಕರ್ಪೂರ ತಿಳಿಸಿದ್ದಾರೆ.

ಮೇ 27 ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೇ 28 ರಂದು ಸಂಜೆ 7ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದೆ ಎಂದು ಹೇಳಿದ್ದಾರೆ.

ಟೂರ್ನಮೆಂಟ್‍ನಲ್ಲಿ ಪಾಲ್ಗೊಳ್ಳಲು ಹೆಸರು ನೋಂದಣಿಗೆ ಮೇ 26 ಕೊನೆಯ ದಿನವಾಗಿದೆ. ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9845621852, 9900728552 ಅಥವಾ 9141277161 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.