ಚೆಸ್ಕಾಂ ನೌಕರರು ಸಂಘಟನೆ ಹಾಗು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ: ಲಕ್ಷ್ಮೀಪತಿ ಸಲಹೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ. 11- ಚಾಮುಂಡೇಶ್ವರಿ ವಿದ್ಯುತ್ ಪ್ರಸರಣದ ನಿಗಮದ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕರ್ತವ್ಯ ನಿರ್ವಹಿಸುವ ಜೊತೆಗೆ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ರಾಜ್ಯಾಧ್ಯಕ್ಷ ಆರ್.ಎಚ್. ಲಕ್ಷ್ಮಿಪತಿ ತಿಳಿಸಿದರು.
ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗದ ಅವರಣದಲ್ಲಿ ನಿರ್ಮಿಸಿದ್ದ ದಿ. ಸಿ.ಎಸ್. ಕೃಷ್ಣಮೂರ್ತಿ ವೇದಿಕೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಸ್ಥಳಿಯ ಸಮಿತಿ ವತಿಯಿಂದ ನಡೆದ ಸಂಘಟನೆ- ಸುರಕ್ಷತೆ ಹಾಗೂ ಅಭಿನಂದನಾ ಸಮಾರಂಭವನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ವ್ಯಾಪ್ತಿಯ ಸ್ಥಳೀಯ ಸಂಘ ಬಹಳ ಸದೃಢವಾಗಿ ಸಂಘಟನೆ ಗೊಂಡಿದೆ. ಕೇಂದ್ರ ಸಮಿತಿಯ ಎಲ್ಲಾ ಸೂಚನೆಗಳನ್ನು ಪಾಲಿಸಿ ಸಂಘಟನೆ ಹೆಚ್ಚಿನ ಒತ್ತು ನೀಡಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅದ್ಬುತವಾದ ಸಮಾರಂಭವನ್ನು ಆಯೋಜನೆ ಮಾಡುವಲ್ಲಿ ಎನ್.ಮಹೇಶ್ ಮತ್ತು ತಂಡ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಜೊತೆಗೆ ನೌಕರರರ ಹಿತವನ್ನು ಕಾಯುವ ನಿಟ್ಟಿನಲ್ಲಿ ಕೇಂದ್ರ ಸಮಿತಿಯ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಿಗಮದಲ್ಲಿ ಇದ್ದಂತಹ ಬಹಳಷ್ಟ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಭದ್ರತೆ ಹಾಗೂ ನೆಮ್ಮದಿಯಿಂದ ನೌಕರರು ಕರ್ತವ್ಯ ನಿರ್ವಹಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ನಿರ್ಮಿಸಿಕೊಡಲು ಕೇಂದ್ರ ಸಮಿತಿ ಬದ್ದವಾಗಿದೆ. ಸಂಘಕ್ಕೆ ನಿವೇಶನ ನೊಂದಣಿ ಮಾಡಿಸಿಕೊಂಡು ಶಂಕುಸ್ಥಾಪನೆಗೆ ಮುಂದಾದರೆ ತಕ್ಷಣದಲ್ಲಿಯೇ ಅನುದಾನ ನೀಡಿದ್ದೇವೆ. ಅಲ್ಲದೇ ನೌಕರರ ವೇತನ ಪರಿಷ್ಕರಣೆ, ಪಿಂಚಣಿ ಟ್ರಸ್ಟ್ ರಚನೆ ಸೇರಿದಂತೆ ನೌಕರರ ಹಿತವನ್ನು ಕಾಪಾಡುತ್ತಿದೆ. 7528 ಹಳೇ ಪಿಂಚಣಿ ಸೌಲಭ್ಯಗಳನ್ನು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲಾಗಿದೆ. ನೌಕರರರು ಜವಾಬ್ದಾರಿಯುತವಾಗಿ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸಂಘದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಅವರನ್ನು ಪರಿಪಕ್ವತೆಯಲ್ಲಿ ಮುನ್ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನೌಕರರ ಸಮೂಹ ಸಾಗಬೇಕು ಎಂದರು.
ಚಾಮರಾಜನಗರ ಮತ್ತು ಕೊಡುಗು ವೃತ್ತ ಅಧೀಕ್ಷಕ ಇಂಜಿನಿಯರ್ ಎಂ.ಕೆ. ಸೋಮಶೇಖರ್ ಸಮಾರಂಭ ಉದ್ಗಾಟಿಸಿ ಮಾತನಾಡಿ, ನೌಕರರ ಸಂಘವು ಬಹಳ ಬಲವರ್ಧನೆ ಗೊಂಡಿದ್ದು, ನೌಕರರು ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಸಾಗುವ ಮೂಲಕ ಸಂಘವನ್ನು ಮತ್ತುಷ್ಟು ಬಲಗೊಳಿಸಭೇಕಾಗಿದೆ. ಆ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಸಲವತ್ತುಗಳನ್ನು ಪಡೆದುಕೊಳ್ಳಲು ಬದ್ದರಾಗೋಣ ಎಂದರು.
ನಾವೆಲ್ಲರು ಮನುಷ್ಯರು ಮೊದಲು ಮನುಷ್ಯತ್ವನ್ನು ರೂಡಿಸಿಕೊಳ್ಳಬೇಕು. ವಿದ್ಯುತ್ ಸಂಬಂಧಿತ ಕೆಲಸವನ್ನು ನಿರ್ವಹಿಸುವಾಗ ಸುರಕ್ಷತೆ ಮತ್ತು ಅರಿವು ಅಗತ್ಯವಾಗಿರುತ್ತದೆ. ನಿಗಮದಲ್ಲಿ ನೌಕರರ ಕೊರತೆ ಬಹಳ ಇದೆ. ಒತ್ತಡದಲ್ಲಿ ಲೈನ್‍ಮೆನ್ ಹಾಗೂ ನೌಕರರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯದಲ್ಲಿಯೇ ನಿಮಗದಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಒತ್ತಡ ಕಡಿಮೆ ಹೆಚ್ಚಿನ ಸೇವೆಯನ್ನು ನೀಡಲು ಸರ್ಕಾರ ಹಾಗೂ ಸಂಘಟನೆಯ ಪ್ರಮುಖ ಮುಂದಾಗಬೇಕು ಎಂದರು.
ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎನ್. ಮಹೇಶ್ ಮಾತನಾಡಿ, ಸಂಘಟನೆಯು ವೃತ್ತಿ ಭದ್ರತೆ, ಅರ್ಥಿಕ ಭದ್ರತೆಯನ್ನು ನೀಡುತ್ತಿದೆ. ಮಗು ಹತ್ತಾಗ ಮಾತ್ರ ತಾಯಿ ಹಾಲು ನೀಡುವುದು. ಹೀಗಾಗಿ ಸಂಘಟನೆಯ ಮೂಲಕ ಹೋರಾಟ ಮಾಡಿದಾಗ ಮಾತ್ರ ನಮ್ಮ ಹಕ್ಕುಗಳು ಹಾಗೂ ಸವಲತ್ತು ಪಡೆದುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಮಿತಿಯ ಎಲ್ಲರನ್ನು ಒಗ್ಗಟ್ಟಿಸಿಕೊಂಡು ನೌಕರರ ಹಿತವನ್ನು ಕಾಯುತ್ತಿದೆ ಎಂದರು.
ಗಡಿ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು. ನಿಗಮದಲ್ಲಿ 60 ಸಾವಿರ ಸಂಬಳ ಪಡೆದುಕೊಳ್ಳುತ್ತಿದ್ದವರು ನಿವೃತ್ತಿ ಹೊಂದಿ ಕೇವಲ 3 ಸಾವಿರ ಪಿಂಚಣಿ ಪಡೆದುಕೊಂಡು ಅರ್ಥಿಕ ಅಸ್ಥಿರತೆಯನ್ನು ಹೊಂದಿದ್ದಾರೆ. ತರಬೇತಿ ಪಡೆಯುತ್ತಿರುವ ನೌಕರರು ಗೌರವ ಧನವನ್ನು 20 ಸಾವಿರಕ್ಕೆ ಏರಿಕೆ ಮಾಡಿ, ನಿಗಮದ ಸ್ವಚ್ಚತಾ ಗಾರನ್ನು ನೇಮಕ ಮಾಡಿ ಖಾಯಂ ಮಾಡಬೇಕೆಂದು ಕೇಂದ್ರ ಸಮಿತಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಟಿ. ಶ್ರೀನಿವಾಸ್, ಕೆ.ಎಂ.ವಿ. ಸ್ವಾಮಿ, ಹಿರಿಯ ಉಪಾಧ್ಯಕ್ಷ ಡಾಕ್ಯಾನಾಯಕ್, ಪ್ರಧಾನ ಕಾರ್ಯದರ್ಶಿ ಕೆ. ಬಲರಾಮ್, ಜಂಟಿ ಕಾರ್ಯದರ್ಶಿ ಕೆ.ಪಿ. ಸೋಮಶೇಕರ್, ಖಜಾಂಚಿ ಕೆ. ಮಂಜುನಾಥ್, ಸಹ ಕಾರ್ಯದರ್ಶಿ ಎಚ್.ಸಿ. ಸೋಮಶೇಖರ ರೆಡ್ಡಿ, ಉಪ ಲೆಕ್ಕ ನಿಯಂತ್ರಾಣಧಿಕಾರ ಸುಲೋಚನಾ, ದಿ. ಕೃಷ್ಣಮೂರ್ತಿ ಪತ್ನಿ ನೇತ್ರಾವತಿ, ಕಾರ್ಯನಿರ್ವಾಹಕ ಇಂಜಿನಿಯರ್ ವಸಂತ್ ಕುಮಾರ್, ಎಸ್ಸಿ.ಎಸ್ಟಿ ಕಲ್ಯಾಣ ಸಮಿತಿಯ ಮಂಜುನಾಥ್, ಸ್ಥಳಿಯ ಸಮಿತಿಯ ಅಧ್ಯಕ್ಷ ಮುರುಳಿ ಕೃಷ್ಣ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಸಿದ್ದರಾಜಪ್ಪ, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಮಹೇಶ್, ನಿರ್ದೇಶಕರಾದ ನಾಗರಾಜು, ಆರ್. ಸೋಮಶೇಖರ್,ರಾಜು, ಶಿವಪ್ಪ ಹಾಗೂ ನಿಗಮದ ನೌಕರರು ಉಪಸ್ಥಿತಿರಿದ್ದರು.