ಕಲಬುರಗಿ,ಜು 16 ಅಖಿಲ ಭಾರತ ಕಾಂಗ್ರೆಸ್ ಕಮೀಟಿ (ಎಐಸಿಸಿ) ಮುಂಬರುವ ತೆಲಂಗಾಣ ಅಸೆಂಬ್ಲಿ ಚನಾವಣೆಯ ಪೂರ್ವಸಿದ್ಧತೆ ಹಾಗೂ ಅಲ್ಲಿನ ಪಕ್ಷ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ತೆಲಂಗಾಣ ರಾಜ್ಯದ ಎಲ್ಲ 17 ಲೋಕಸಭಾ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಕಲಬುರಗಿ ದಕ್ಷಿಣ ಅಸೆಂಬ್ಲಿ ಶಾಸಕ ಅಲ್ಲಮಪ್ರಭು ಪಾಟೀಲರಿಗೆ ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಎಐಸಿಸಿ ಪ್ರ. ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರಕಟಣೆ ನೀಡಿದ್ದಾರೆ.