ಚೆಲುವನಾರಾಯಣಸ್ವಾಮಿ ಜಯಂತ್ಯುತ್ಸವ ಧಾರ್ಮಿಕ ಕೈಂಕರ್ಯ ಆರಂಭ

ಮೇಲುಕೋಟೆ : ಏ.17:- ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ sssಸಾವಿರದ ಆರನೇ ಜಯಂತ್ಯುತ್ಸವ ಏ.25ರಂದು ಅವರದೇ ಕರ್ಮಭೂಮಿಯಾದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಯಲ್ಲಿ ವೈಭವದಿಂದ ನಡೆಯಲಿದೆ ಜಯಂತ್ಯುತ್ಸವದ ಧಾರ್ಮಿಕ ಕೈಂಕರ್ಯಗಳು ಏ.16ರಿಂದಲೇ ಆರಂಭವಾಗಿದೆ.
ಮಹೋತ್ಸವದ ಅಂಗವಾಗಿ ರಾಮಾನುಜಾಚಾರ್ಯರಿಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ವಿವಿಧ ವಾಹನೋತ್ಸವ 9-30ಕ್ಕೆ ಅಭಿಷೇಕ ನೆರವೇರಲಿದೆ 20ರಂದು ರಾತ್ರಿ ಬಂಗಾರದ ಪುಷ್ಪಪಲ್ಲಕ್ಕಿ ಏಪ್ರಿಲ್ 21ರ ರಾತ್ರಿ 8 ಗಂಟೆಗೆ ರಾಮಾನುಜರಿಗೆ ಗಂಡಬೇರುಂಡ ಪ್ರಭಾವಳಿಯೊಂದಿಗೆ ಗೋವಿಂದರಾಜಮುಡಿ ಉತ್ಸವ 24 ರಂದು ಬೆಳಿಗ್ಗೆ 8 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ಭಾರತಾದ್ಯಂತ ಎಲ್ಲಾ ದೇವಾಲಯಗಳಲ್ಲಿ ರಾಮಾನುಜಾಚಾರ್ಯರ ಜಯಂತ್ಯುತ್ಸವ ನಡೆದರೂ ಸಹ ವೆಂಕಟೇಶ್ವರನ ತಿರುಮಲೆ, ಶ್ರೀರಂಗಂ, ಕಂಚಿ ಹಾಗೂ ಶ್ರೀಪೆರಂಬೂದೂರು ಹಾಗೂ ಕರ್ನಾಟಕದ ಮೇಲುಕೋಟೆಯಲ್ಲಿ ಆಚರಿಸುವ ತಿರುನಕ್ಷತ್ರಮಹೋತ್ಸವಕ್ಕೆ ವಿಶೇಷಮಹತ್ವವಿದೆ
ಏ.18ರಂದು ಸೂರ್ಯಮಂಡಲವಾಹನ 19ರಂದು ಚಂದ್ರಮಂಡಲವಾಹನ 20ಮತ್ತು 22ರಂದು ಅಶ್ವವಾಹನೋತ್ಸವ 21ರಂದುಅವತಾರಸ್ಥಳ ತಮಿಳುನಾಡು ಶ್ರೀಪೆರಂಭೂದೂರಿನಿಂದ ಸಲ್ಲುವ ಮಾಲೆ ಮರ್ಯಾದೆ ಅರ್ಪಣೆ 23 ರಂದು ಗಜವಾಹನೋತ್ಸವ 25 ರಂದು ಸಮರಭೂಪಾಲವಾಹನೋತ್ಸವ ನೆರವೇರಲಿದ್ದು ದೇವಾಲಯದ ಆವರಣ ತಳಿರು ತೋರಣಗಳಿಂದ ಸಿಂಗಾರವಾಗಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ನೇತೃತ್ವದಲ್ಲಿ ವ್ಯವಸ್ಥೆಗಳು ಸುಗಮವಾಗಿ ಸಾಗಿವೆ
ರಾಮಾನುಜ ಕಟೀಯ ಬಿಡುಗಡೆ
ಯತಿರಾಜದಾಸರ್ ಗುರುಪೀಠದ ಸ್ಥಾನೀಕಂ ಪ್ರಕಾಶನದಿಂದ ವೇದ ಸಂಸ್ಕøತ ವಿದ್ವಾಂಸ ಹಾಗೂ ಖ್ಯಾತ ಇತಿಹಾಸ ತಜ್ಞ ಡಾ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಸಂಪಾದಕತ್ವದಲ್ಲಿ “ರಾಮಾನುಜ ಕಟೀಯಂ” ಕಿರುಪುಸ್ತಕ ಹೊರತರಲಾಗುತ್ತಿದೆ 24ರಂದು ರಾತ್ರಿ ಬಿಕ್ಷಾಕೈಂಕರ್ಯದವೇಳೆ ಪುಸ್ತಕ ಬಿಡುಗಡೆಯಾಗಲಿದೆ.
ಪ್ರಮುಖ ದಿನವಾದ 25 ರಂದು ಬೆಳಿಗ್ಗೆ 9 ಗಂಟೆಗೆ ಕಲ್ಯಾಣಿಯಿಂದ ಅಭಿಷೇಕದ ತೀರ್ಥ ತರಲಾಗುತ್ತದೆ ನಂತರ ದ್ವಾದಶಾರಾಧನೆಯೊಂದಿಗೆ ರಾಮಾನುಜರಿಗೆ ಮಹಾಭಿಷೇಕ ನಡೆಯಲಿದೆ ನಂತರ ಮಹಾಶಾತ್ತುಮೊರೈ ಪ್ರಸಾದವಿನಿಯೋಗ ಸಂಜೆ 4 ಗಂಟೆಗೆ ಗಂದದ ಅಲಂಕಾರದಲ್ಲಿ ಬೆಳ್ಳಿಯಪಲ್ಲಕ್ಕಿ ಉತ್ಸವ ರಾತ್ರಿ 8 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ದಶಾವತಾರ ಉತ್ಸವ ನೆರವೇರಲಿದೆ
ರಾಮಾನುಜರಿಗೆ ಸ್ಥಾನೀಕರ ಬಿಕ್ಷಾಕೈಂಕರ್ಯ
ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ 12ವರ್ಷಗಳಕಾಲ ವಾಸ್ತವ್ಯವಿದ್ದ ವೇಳೆ ಒಂದೊಂದು ದಿನ ಒಬ್ಬರು ಸ್ಥಾನೀಕರ ಕಟೀರದಲ್ಲಿ ಬಿಕ್ಷೆಸ್ವೀಕರಿಸುತ್ತಿದ್ದರೆಂಬ ಐತಿಹಾಸಿಕ ವಿಶೇಷದ ಕುರುಹಾಗಿ ಏ.22 ರಿಂದ 25ರವರೆಗೆ ಸ್ಥಾನೀಕರ ಬಿಕ್ಷಾಕೈಂಕರ್ಯ ನಡೆಯಲಿದೆ. 22 ರಂದು ರಾತ್ರಿ ಪ್ರಥಮಸ್ಥಾನೀಕರ ಕರಗಂ ನಾರಾಯಣಯ್ಯಂಗಾರ್ ಗುರುಪೀಠದ ಬಿಕ್ಷಾಕೈಂಕರ್ಯ 23ರಂದು ರಾತ್ರಿ 3ನೇ ಸ್ಥಾನೀಕರಾದ ಕೋವಿಲ್ ನಂಬಿಸಂಪತ್ತಕುಮಾರನ್ ಮಹಾರಥೋತ್ಸವದ ದಿನವಾದ ಏ.24 ರಾತ್ರಿ ಯತಿರಾಜದಾಸರ್ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಗುರುಪೀಠದಿಂದ ಬಿಕ್ಷಾಕೈಂಕರ್ಯ ನೆರವೇರಲಿದೆ. ತಿರುನಕ್ಷತ್ರ ಮಹೋತ್ಸವದ ಸಂಜೆ ಸೀತಾರಣ್ಯದಲ್ಲಿ ಎರಡನೇ ಸ್ಥಾನೀಕರ ಬಿಕ್ಷಾಕೈಂಕರ್ಯವಿದ್ದು ಶಲ್ಲಪ್ಪನ್ ಸೇವೆ ನೆರವೇರಿಸಲಿದ್ದಾರೆ