ಚೆಪೆಟ್ಲಾ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ಜರುಗಿದ ಘತ್ತರಗಿ ಭಾಗ್ಯವಂತಿ ಜಾತ್ರೆ

ಗುರುಮಠಕಲ್:ಎ.25: ಸಾಕ್ಷಾತ್ ಘತ್ತರಗಿ ಭಾಗ್ಯವಂತಿ ಸ್ವಯಂಭೂ ಸರ್ಪರೂಪದಲ್ಲಿ ಕಾಣಿಸಿಕೊಂಡು ನಿಜವಾಗಿಯೂ ನಂಬಿದ ಭಕ್ತರ ಭವ ಬಾದೆಗಳನ್ನು ಪರಿಹರಿಸುವ ತಾಯಿ ಚೆಪೆಟ್ಲಾ ಗ್ರಾಮದಲ್ಲಿ ಬಂದು ನೆಲೆಸಿರುವದು ಹಾಗೂ ಭಕ್ತರ ಭವ ದುಃಖಗಳು ಪರಿಹಾರ ಮಾಡುವ ಭಾಗ್ಯವಂತಿ ತಾಯಿ ಅಂದರೆ ಭಾಗ್ಯ ಅಂದರೆ ಭಕ್ತರ ಭವ ಕಷ್ಟಗಳನ್ನು. ವಂತಿ ಅಂದರೆ ತೀರಿಸುವದು. ಅಂದರೆ ಭಕ್ತರ ಭವ ಕಷ್ಟಗಳಲ್ಲಿ ತಾನು ತಾಯಿಯಾಗಿ ಕಷ್ಟಗಳನ್ನು ತೀರಿಸುತ್ತಿದ್ದಾಳೆ..ಇಂತಹ ಮಹಾ ಮಾತೆಯ ದೇವಾಲಯ ಗುರುಮಠಕಲ್ ತಾಲೂಕ ಸಮಿಪದ ಗ್ರಾಮ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಚೆಪೆಟ್ಲಾ ಗ್ರಾಮದ ವೆಂಕಟರೆಡ್ಡಿ ತಂದೆ /ಜಗನ್ನಾಥ ರೆಡ್ಡಿ ಪೆದ್ದನಮೋಳ ಇವರ ಹೊಲದಲ್ಲಿ ಅಂದರೆ ಚೆಪೆಟ್ಲಾ ದಿಂದ ಮಿಟ್ಟತಿಪಡಂ ಪಲ್ಲಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಸ್ವಯಂಬು ನೆಲೆಸಿರುವ ಈ ಮಹಾ ತಾಯಿ ಘತ್ತರಗಿ ಭಾಗ್ಯವಂತಿ ದೇವಿಯ ದರ್ಶನ ಭಕ್ತರು ಪಡೆಯ ಬಹುದು. ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಅನ್ನುವ ಈ ಮಹಾ ತಾಯಿ ಘತ್ತರಗಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವವು ಬಹು ವಿಜೃಂಭಣೆಯಿಂದ 24-04-2023 ರಂದು ಸೋಮವಾರ ದಂದು ಜರಿಗಿತು ಅಂದು ಮುಂಜಾನೆ ವೆಂಕಟರೆಡ್ಡಿ ತಂದೆ ಜಗನ್ನಾಥ ರೆಡ್ಡಿ ಪೆದ್ದನಮೋಳ ಚೆಪೆಟ್ಲಾ ಇವರ ಮನೆಯಿಂದ ಮುತ್ತೈದೆಯರು ಕುಂಭ ಕಳಸ ಹೊತ್ತು ವಿಶೇಷ ವಾಗಿ ಡೊಳ್ಳು ಕುಣಿತ. ಹಾಗೂ ಸಿಡಿ ಮದ್ದು ಗಳನ್ನು ಸುಡುತ್ತ ಬಾಜಭಜಂತ್ರಿ ಯೊಂದಿಗೆ ಮಹಾತಾಯಿಯ ಜೈಯ ಘೋಷಣೆ ಗಳು ಕೂಗುತ್ತಾ ಸಡಗರ ಸಂಭ್ರಮದಿಂದ ಮಹಾತಾಯಿಯ ಭವ್ಯ ಮಹಾ ಪಲ್ಲಕ್ಕಿ ಮೆರವಣಿಗೆಯು ಚೆಪೆಟ್ಲಾ ಗ್ರಾಮದ ಮುಖ್ಯ ಬೀದಿಗಳಲ್ಲಿ ಭಕ್ತರು ಜಯ ಘೋಷಣೆಗಳು ಕೂಗುತ್ತಾ ಗ್ರಾಮದಿಂದ ಸುಮಾರು ಮೂರು ಕಿಲೋ ಮೀಟರ್ ದೂರದಲ್ಲಿರುವ ಭಕ್ತರ ಸಮ್ಮುಖದಲ್ಲಿ ಮಹಾ ಪಲ್ಲಕ್ಕಿ ಉತ್ಸವವು ದೇವಾಲಯವು ಸೇರಿತು. ಭಕ್ತರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಸಂತಾನ ಭಾಗ್ಯ ಇಲ್ಲದವರಿಗೆ ಮತ್ತು ನಮಗೆ ಕಷ್ಟ ಸುಖಗಳನ್ನು ತಾಯಿಯ ಬಳಿ ಬೇಡಿ ಕೊಳ್ಳಲು ನಮ್ಮ ಕಷ್ಟಗಳನ್ನು ಪರಿಹಾರ ಮಾಡಿದ್ದಾಳೆ.ಮತ್ತು ಮಹಾ ತಾಯಿಯು ಈ ಹೊಲದಲ್ಲಿ ಬಂದು ನೆಲೆಸಿ ಸುಮಾರು ಇಲ್ಲಿಗೆ ಎಂಟು ವರ್ಷಗಳು ಕಳೆದವು ಪ್ರತಿ ವರ್ಷ ಇಂದಿನ ದಿನ ಜಾತ್ರೆಯು ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ ಕರ್ನಾಟಕ ರಾಜ್ಯದಿಂದ ಅಲ್ಲದೆ ಬೇರೆ ರಾಜ್ಯಗಳಿಂದಲು ಇಲ್ಲಿಗೆ ಬಂದು ಮಹಾತಾಯಿಯ ದರುಶನ ಭಾಗ್ಯ ಪಡೆದು ಪುನಿತರಾಗುತ್ತಿದ್ದಾರೆ. ಇಂದಿನ ಈ ಜಾತ್ರೆಗೆ ಬಂದಂತಹ ಭಕ್ತರಿಗು ಅನ್ನ ಪ್ರಸಾದ ತೀರ್ಥ ಪ್ರಸಾದ ಸ್ವೀಕರಿಸಿ ಮಹಾತಾಯಿಯ ಕೃಪೆಗೆ ಪಾತ್ರರಾಗಿ. ರಾತ್ರಿ ಪೂರ್ತಿ ಭಕ್ತರು ಭಜನೆ ಕಾರ್ಯಕ್ರಮ ನೆರವೇರಿಸಿ ಮಹಾ ತಾಯಿ ಕೃಪೆಗೆ ಪಾತ್ರರಾದರು. ಮಹಾತಾಯಿಯ ದೇವಾಲಯದ ವೆವಸ್ಥಾಪಕರು ಶ್ರೀ ವೆಂಕಟರೆಡ್ಡಿ ತಂದೆ ಜಗನ್ನಾಥ ರೆಡ್ಡಿ ಪೆದ್ದನಮೋಳ ಚೆಪೆಟ್ಲಾ ಮೊಬೈಲ್ ನಂಬರ್ -7760303888. ಹಾಗೂ ಕಾರ್ಯಕ್ರಮ ದಲ್ಲಿ ಪೆದ್ದನಮೋಳ ಕುಟುಂಬಸ್ಥರು. ಹೈದರಾಬಾದ್ ರಾಘವೇಂದ್ರ ಪುಜಾರಿ ಹಾಗೂ ಗ್ರಾಮಸ್ಥರು ಸಾರ್ವಜನಿಕರು ಪರಸ್ಥಳದಿಂದ ಭಕ್ತರು ಸೇರಿದ್ದರು ಕಾರ್ಯಕ್ರಮ ಬಹು ವಿಜೃಂಭಣೆಯಿಂದ ಜರುಗಿತು.