ಚೆನ್ನೂರ: ರೈತರ ಬಡ್ಡಿರಹಿತ ಸಾಲ ವಿತರಣೆಗೆ ಚಾಲನೆ

ಚಿಂಚೋಳಿ,ನ.9- ತಾಲ್ಲೂಕಿನ ಗಡಿಲಿಂಗದಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚೆನ್ನೂರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ರೈತರಿಗೆ 1.13 ಕೋಟಿ ರೂ.ಬಡ್ಡಿರಹಿತ ಸಾಲ ವಿತರಣೆಗೆ ಶಾಸಕ ಡಾ.ಅವಿನಾಶ ಜಾಧವರವರು ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಅವಿನಾಶ ಜಾಧವ ಅವರು, ದೇಶದಲ್ಲಿ ನಿಜವಾದ ದೇವರು ಯಾರಾದರೂ ಇದ್ದರೆ ಅವರು ರೈತರು ಮಾತ್ರ, ಅನ್ನನೀಡುವ ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ವರ್ಷಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಡಿs.10000 ನೇರವಾಗಿ ರೈತರಿಗೆ ಖಾತೆಗೆ ಜಮಾ ಆಗುತ್ತದೆ.
ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಕೂಡ ರೈತರಿಗೋಸ್ಕರ ಮೊಟ್ಟಮೊದಲು 25 ಸಾವಿರ ರೂ ಬಡ್ಡಿರಹಿತ ಸಾಲ ವಿತರಿಸಿ ರೈತರಿಗೆ ಮೇಲೇತ್ತುವ ಕೆಲಸ ಲಸ ಬಿಜೆಪಿ ಸರ್ಕಾರ ಮಾಡುತ್ತಿದೆ.
ಬಡ್ಡಿರಹಿತ ಸಾಲವು ಒಂದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ ನಂತರ ಶೇಕಡಾ 13 ರಷ್ಟು ಬಡ್ಡಿ ಇರುತ್ತದೆ ಎಲ್ಲಾ ರೈತರು ಸಾಲ ಪಡೆದು ವರ್ಷದ ಒಳಗಡೆ ಕಟ್ಟಿದರೆ ಇದರ ಡಬಲ್ ಸಾಲ ನೀಡಲಾಗುವುದು.
ತಾಲ್ಲೂಕಿನಾದ್ಯಂತ ಒಳ್ಳೆಯ ಫಲವತ್ತಾದ ಭೂಮಿ, ಗಾಳಿ, ನೀರು, ಇವೆ, ಹೊಲಗದ್ದೆಗಳಲ್ಲಿ ಭಾವಿ, ಬೋರವೇಲ್ ತೋಡಿಕೊಂಡು ಕುರಿ ಸಾಗಣಿ,ಕೋಳಿ ಸಾಗಣಿ, ಆಕಳು ಸಾಗಣಿ,ಮಾಡಿ ಕಬ್ಬು, ತರಕಾರಿ, ಹತ್ತಿ,ಸೇಂಗಾ,ಜೋಳ,ಕಡ್ಲೆ,ಅನೇಕ ಬೆಳೆಗಳು ರೈತರು ಬೆಳೆಸಿ ಆದಾಯ ದ್ವಿಗುಣಗೊಳಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ 3ಲಕ್ಷ,4ಲಕ್ಷ,10ಲಕ್ಷದವರೆಗೆ ಸಾಲ ನೀಡಲಾಗುವುದು ರೈತರು ಸದುಪಯೋಗ ಪಡೆದುಕೊಂಡು ಕೃಷಿ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಕಲಬುರ್ಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ ಅವರು ಮಾತನಾಡಿ ಈಗಾಗಲೇ ಡಿಸಿಸಿ ಬ್ಯಾಂಕ್ ವತಿಯಿಂದ 17 ಕೋಟಿ ರೂ.ಬಡ್ಡಿರಹಿತ ಸಾಲ ವಿತರಣೆ ಮಾಡಲಾಗಿದೆ. ಅನೇಕ ರೈತರು ಸಾಲ ತೀರಿಸಲು ಆಗದೆ ಆತ್ಮಹತ್ಯೆಗೆ ಶರಣಗುತ್ತಿದ್ದಾರೆ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ರೈತರ ಜೊತೆ ಡಿಸಿಸಿ ಬ್ಯಾಂಕ್ ಇರುತ್ತದೆ ಅದರಿಂದ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಿಮ್ಮ ಬೆಂಬಲಕ್ಕೆ ಸದಾ ಡಿಸಿಸಿ ಬ್ಯಾಂಕವಿದೆ.
ರೈತರು ಸಂತೋಷವಿದ್ದರೆ ದೇಶ ಸಂತೋಷದಿಂದ ಇರಲು ಸಾಧ್ಯ ರೈತರು ಅರ್ದಿಕವಾಗಿ ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ ಎಂದರುಮತ್ತು
ಚಿಂಚೋಳಿ ತಾಲೂಕಿನಲ್ಲಿ ಈಗಾಗಲೇ ಶುಗರ್ ಫ್ಯಾಕ್ಟರಿ ಸ್ಥಾಪನೆ ಆಗುತ್ತಿದ್ದು ಇದರ ಗೋಸ್ಕರ ತಾಲೂಕಿನ ಎಲ್ಲ ರೈತರು ತಮ್ಮ ತಮ್ಮ ಹೊಲಗಳಲ್ಲಿ ಕಬ್ಬು ಬೆಳೆಸಬೇಕಾದರೆ ನೀರಿನ ಅವಶ್ಯಕತೆ ಬಹಳಷ್ಟು ಇದ್ದು ಕಲ್ಬುರ್ಗಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರ ಹೊಲಗಳಲ್ಲಿ ನೀರಾವರಿ ಗೋಸ್ಕರ ಬೇಕಾಗುವ ಸೌಲತ್ತು ಗಳಿಗಾಗಿ ಡಿಸಿಸಿ ಬ್ಯಾಂಕ್ ಬತ್ತಿಯಿಂದ ಲೋನ್ ಕೂಡವ ವ್ಯವಸ್ಥೆ ನಾ ಮಾಡುತ್ತೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ. ಚೆನ್ನೂರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಕೋಡ್ಲಿ, ಗಡಿಲಿಂಗದಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರಿಶಂಕರ ಉಪ್ಪಿನ, ಪ್ರೇಮಸಿಂಗ್ ಜಾಧವ, ಶೈಲೇಶ ಹುಲಿ,ನರಸಿಂಗ್, ಶಕುಂತಲಾ ಪಾಟೀಲ, ಅಲ್ಲಂಪ್ರಭು ಪಾಟೀಲ ಹುಲಿ. ಸತೀಶರೆಡ್ಡಿ. ಲಕ್ಷ್ಮೀಕಾಂತ, ದಿವಾಕರ ಜಾಗೀರದಾರ, ಭವನಪಾಟೀಲ, ಸುಂದರ ಡಿ ಸಾಗರ್. ನೀಲಕಂಠ, ಸಂತೋಷರೆಡ್ಡಿ, ಶರಣಯ್ಯ, ಮತ್ತು ಚೆನ್ನೂರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಗಡಿಲಿಂಗದಳ್ಳಿ ಚೆನ್ನೂರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾದರು.