ಚೆನ್ನೂರ, ಠಾಣಗುಂದಿ ಬಳಿ ಬ್ರಿಜ್ ಕಂ ಬ್ಯಾರೇಜ್ ನನ್ನ ಕನಸು: ಶಾಸಕ ಮುದ್ನಾಳ

ಯಾದಗಿರಿ; ಠಾಣಗುಂದಿ ಬಳಿ ಭೀಮಾ ನದಿಗೆ ಹಾಗೂ ವಡಿಗೇರಾ ತಾಲ್ಲೂಕಿನ ಚನ್ನೂರ(ಜೇ)ಹತ್ತಿರ ಹರಿಯುವ ಕೃಷ್ಣಾ ನದಿಗೆ ದೊಡ್ಡ ಬ್ರಿಡ್ಜ್ ಕಂ ಬ್ಯಾರೇಜ್ ಗಳ ನಿರ್ಮಾಣ ನನ್ನ ಕನಸಿನ ಯೋಜನೆಗಳಾಗಿದ್ದು ಇವುಗಳ ಸಾಕಾರಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸ್ಲಲಿಸಲಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರು.
ನಗರದ ಎನ್.ವಿ.ಎಂ. ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಎರಡು ಕಾಮಗಾರಿ ಅನುಷ್ಠಾನಗೊಂಡರೆ ಎರಡು ಗ್ರಾಮಗಳ ಸೇರಿದಂತೆ ಸುತ್ತಮುತ್ತ ಹಲವಾರು ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆ ದೂರವಾಗುವ ಜೊತೆಗೆ ಅವರ ಜಮಿನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ನಗರ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣವರೆಗೆ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಬಗ್ಗೆ ಜನರಿಂದ ವ್ಯಾಪಕ ದೂರ ಕೇಳಿ ಬರುತ್ತಿವೆ ನಾನು ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲಿಸುತ್ತೆನೆ ಎಂದರು.
ವಡಗೇರಿ ಅಭಿವೃದ್ಧಿಗೆ ನಿರ್ಲಕ್ಷಿಸಿಲ್ಲ:
ನನ್ನ ಮತಕ್ಷೇತ್ರದ ನೂತನ ತಾಲ್ಲೂಕ ಕೇಂದ್ರವಾಗಿರುವ ವಡಗೇರಾ ಪಟ್ಟಣ ಸೇರಿದಂತೆ ಗ್ರಾಮಿಣ ಭಾಗಗಳ ಅಭಿವೃದ್ಧಿಗೆ ನಿರಂತರ ಪ್ರಯತ್ನಿಸಿದ್ದೇನೆ ನಿರ್ಲಕ್ಷಿಸಿಲ್ಲ ಎಂದು ಅವರು ತಿಳಿಸಿದರು.
ವಡಗೇರ ಪಟ್ಟಣದಲ್ಲಿ ಮೊದಲು ಮಿನಿ ವಿಧಾನಸೌದ ಕಟ್ಟಡ ನಿರ್ಮಾಣ ಮಾಡಬೇಕು ಅಂದಾಗ ಮಾತ್ರ ಸರಕಾರ ಎಲ್ಲಾ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತವೆ,ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಕಂದಾಯ ಸಚಿವ ಆರ್ ಅಶೋಕ ರಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದೇನೆ ಗ್ರಾಮ ಪಂಚಾಯತ್ ಅಸ್ತಿತ್ವದಲ್ಲಿದೆ ಅದನ್ನು ಪಟ್ಟಣ ಪಂಚಾಯತ್ ಗೆ
ಮೇಲ್ದರ್ಜೆಗೆ ಏರಿಸಬೇಕ್ಕೆಂದು ನಾನು ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಅವರನ್ನು ಬೇಟಿಯಾಗಿ ಚರ್ಚಿಸಿದ್ದೇನೆ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮೆಡಿಕಲ್ ಕಾಲೇಜು: ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಿ ಸೂಕ್ತ ಅನುದಾನ ಬಿಡುಗಡೆ ಮಾಡುತ್ತನೆ ತಿಳಿಸಿದ್ದಾರೆ ಶೀಘ್ರವೇ ಅಡಿಗಲ್ಲು ಸಮಾರಂಭ ನಿಗಧಿಪಡಿಸಲಾಗುವುದು ಜೊತೆಗೆ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೆರಿಸಲಾಗುದು ಇದರಿಂದ ಅಭಿವೃದ್ಧಿಗೆ ವೇಗ ಸಿಗಲಿದೆ, ರಾಜ್ಯದಲ್ಲಿ ಕೊರೊನಾ ವೈರಸ್ ದಾಳಿಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ,ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೋರ, ಮಲ್ಲಣ್ಣಗೌಡ ಹತ್ತಿಕುಣಿ, ವಿಲಾಸ ಪಾಟೀಲ್, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮುದ್ರಾ ಸೇರಿದಂತೆ ಪಕ್ಷದ ಹಿರಿ ಕಿರಿಯ ನಾಯಕರು ಉಪಸ್ಥಿತರಿದ್ದರು .