ಚೆನ್ನೂರಿನಲ್ಲಿ ಸಂಗೀತ ಕಾರ್ಯಕ್ರಮ

ಕಲಬುರಗಿ.ಜು. 25 ಜೇವರಗಿ ತಾಲೂಕಿನ ಚೆನ್ನೂರು ಗ್ರಾಮದಲ್ಲಿ ಜೇವರಗಿಯ ಪುಟ್ಟರಾಜ ಗವಾಯಿಗಳವರ ಸಾಂಸ್ಕøತಿಕ ಹಾಗೂ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸ್ಮರಣಾರ್ಥವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಭು ಬಸಯ್ಯ ಸ್ವಾಮಿಗಳು ಕುಕನೂರು ಸಾನಿಧ್ಯವನ್ನು ವಹಿಸಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ
ಅವರು ಉದ್ಘಾಟನೆ ನೆರವೇರಿಸಿದರು. ಬಿ ಎನ್ ಪಾಟೀಲ್ ರವರು ಅಧ್ಯಕ್ಷತೆ ಸ್ಥಾನವನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಮಲ್ಲನಗೌಡ ಕಡಕಲ್, ಬಸವರಾಧ್ಯ ವಿ ಸುರಾಗಿಮಠ, ದೇವನಗೌಡ ಪೆÇಲೀಸ್ ಪಾಟೀಲ್, ಭೀಮಸೇನ ರಾವ್ ಕುಲಕರ್ಣಿ, ಬಾಪುರಾವ್ ಸಾಹೂ, ಚಿದಾನಂದ ಗಾಣಿಗೇರ, ಮಲ್ಲಣ್ಣಗೌಡ ಹಿರೆಗೌಡರ್, ಅಮರಪ್ಪ ತಳವಾರ್ ಮುಂತಾದವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಪೆÇಲೀಸ್ ಪಾಟೀಲ್ ಕುಕನೂರ್ ರವರು ಹಿಂದುಸ್ತಾನಿ ಸಂಗೀತ, ಹಾನಿಫಾ ಶೇಕ್ ರವರು ಸುಗಮ ಸಂಗೀತ ಹಾಗೂ ಸಿದ್ದನಗೌಡ ಚನ್ನುರ ತತ್ವಪದ ಸಂಗೀತವನ್ನು ನಡೆಸಿಕೊಟ್ಟರು ಮತ್ತು ಚನ್ನುರು ಗ್ರಾಮದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಹಾಂತಗೌಡ ಸ್ವಾಗತ ಕೋರಿದರು, ಸದಾಶಿವ ಸ್ವಾಮಿ ನಿರೂಪಣೆ ಮಾಡಿದರು ಎಂದು ಟ್ರಸ್ಟನ ಅಧ್ಯಕ್ಷರು ತಿಳಿಸಿದ್ದಾರೆ.