ಅಥಣಿ : ಅ.14:ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವ 2023 ನಿಮಿತ್ತವಾಗಿ ವೀರ ಜ್ಯೋತಿ ಯಾತ್ರೆಯು ನಾಳೆ ದಿ, 15 ರಂದು ರಾತ್ರಿ 9:30 ಕ್ಕೆ ವಿಜಯಪುರ ಮಾರ್ಗವಾಗಿ ಅಥಣಿ ಪಟ್ಟಣಕ್ಕೆ ಆಗಮಿಸುತ್ತಿದ್ದು ತಾಲ್ಲೂಕು ಆಡಳಿತದಿಂದ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳ ಲಾಗುವುದು ಎಂದು ತಹಶಿಲ್ದಾರ ರಾಜೇಶ ಬುರ್ಲಿ ಹೇಳಿದರು.
ಇಂದು ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು, ಇದೇ ಅ. 23 ರಂದು ಆಚರಿಸಲಿರುವ ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ಜ್ಯೋತಿ ಯಾತ್ರೆ ಹೊರಟಿದ್ದು ವಿಜಯಪುರ ಮಾರ್ಗವಾಗಿ ನಾಳೆ ದಿ. 15 ರಂದು ಸಂಜೆ 7:30ಕ್ಕೆ ತಾಲೂಕಿನ ತೆಲಸಂಗದಲ್ಲಿ ಹೋಬಳಿಯಿಂದ ಅಥಣಿ ತಾಲೂಕು ಪ್ರವೇಶ ಮಾಡಲಿದೆ. ವೀರ ಜ್ಯೋತಿ ಯಾತ್ರೆಯನ್ನು ತಾಲೂಕಾ ಆಡಳಿತದ ಪರವಾಗಿ ತೆಲಸಂಗ ಹೋಬಳಿಯ ಉಪತಹಸೀಲ್ದಾರ, ಗ್ರಾಮ ಪಂಚಾಯಿತಿ ಪರವಾಗಿ ಪಿಡಿಓ. ಸೇರಿದಂತೆ ಗಣ್ಯಮಾನ್ಯರು ಹಾಗೂ ಗ್ರಾಮಸ್ಥರೊಂದಿಗೆ ಪೂಜೆ ಸಲ್ಲಿಸಿ ಸಕಲ ಗೌರವಗಳೊಂದಿಗೆ ಆದರದಿಂದ ಬರಮಾಡಿಕೊಂಡು ಗ್ರಾಮದಲ್ಲಿ ಸಂಚರಿಸಿ ನಂತರ ಅಥಣಿ ಪಟ್ಟಣಕ್ಕೆ ರಾತ್ರಿ 9:30 ಗಂಟೆಗೆ ಆಗಮಿಸುವುದು. ತಾಲೂಕಾ ಆಡಳಿತದಿಂದ ತಹಶೀಲ್ದಾರ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಗರದ ಗಣ್ಯರು ಉಪಸ್ಥಿತಿಯಲ್ಲಿ ಸ್ವಾಗತಿಸಲಾಗುವುದು. ಅಲ್ಲಿಂದ ಸುಕ್ಷೇತ್ರ ಗಚ್ಚಿನ ಮಠದಲ್ಲಿ ರಾತ್ರಿ ವಾಸ್ತವ್ಯ ಮಾಡಿ ದಿ, 16 ರಂದು ಬೆಳಗ್ಗೆ 8 ಗಂಟೆಗೆ ಪೂಜ್ಯರಿಂದ ಪೂಜೆ ನೆರವೇರಿಸಿದ ನಂತರ ಜ್ಯೋತಿ ಯಾತ್ರೆಯು ಗಚ್ಚಿನ ಮಠದಿಂದ ಸಕಲ ವಾಧ್ಯ ವೃಂದದೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಗೂ ಎಲ್ಲ ಗಣ್ಯಮಾನ್ಯರ ಸಹಭಾಗಿತ್ವದೊಂದಿಗೆ ಪಟ್ಟಣದ ಮುರುಘೇಂದ್ರ ಬ್ಯಾಂಕ್ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಅಂಬೇಡ್ಕರ್ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಶಿವಯೋಗಿ ವೃತ್ತ ಬಸವೇಶ್ವರ ವೃತ್ತ, ಹಾಗೂ ಶಿವಾಜಿ ವೃತ್ತದ ಮೂಲಕ ಸಂಚರಿಸಿ ಜ್ಯೋತಿ ಯಾತ್ರೆಯು ಕಾಗವಾಡಕ್ಕೆ ತೆರಳಲಿದೆ, ಎಂದರು.
ಜ್ಯೋತಿ ಯಾತ್ರೆಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಮುಖಂಡರು ಆಗಮಿಸುವ ನಿರೀಕ್ಷೆ ಇದೆ
ಈ ಕಾರ್ಯಕ್ರಮಕ್ಕೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ತಹಶೀಲ್ದಾರ ರಾಜೇಶ್ ಬುರ್ಲಿ ಸೂಚನೆ ನೀಡಿದ್ದಾರೆ
ಈ ಸಭೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಾದ ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರಣ್ಣ ವಾಲಿ, ಸಿಡಿಪಿಓ ಅಶೋಕ ಕಾಂಬಳೆ, ತೆಲಸಂಗ ಹೋಬಳಿ ಉಪ ತಹಶೀಲ್ದಾರ್ ಮಹ್ಮದರಫೀಕ ಯತ್ನಟ್ಟಿ, ತೆಲಸಂಗ ಗ್ರಾಮ ಪಂಚಾಯಿತಿ ಪಿಡಿಓ ಬೀರಪ್ಪ ಕಡಗಂಚ್ಚಿ,
ಬಿ ವಾಯ್ ಹೊಸಕೇರಿ, ಎಸ್ ಎ ಮರನೂರ, ಕಂದಾಯ ನಿರೀಕ್ಷಕ ಎಸ್ ಬಿ ಮೆಣಸಂಗಿ. ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ, ಸಮಾಜ ಕಲ್ಯಾಣ ಇಲಾಖೆಯ ಚಂದ್ರಕಾಂತ ಕಾಂಬಳೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರಾದ ರಾಮನಗೌಡ ಪಾಟೀಲ, ಬಸನಗೌಡ ಪಾಟೀಲ (ಬೊಮನಾಳ) ವಿಜುಗೌಡ ನೇಮಗೌಡ, ಕನ್ನಡ ಪರ ಸಂಘಟನೆಯ ಮಂಜು ಹೋಳಿಕಟ್ಟಿ, ಜಗನ್ನಾಥ ಬಾಮನೆ, ಸಿದ್ದು ಮಾಳಿ, ಮಹಾದೇವಿ ಹೋಳಿಕಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.