ಚೆನ್ನಮಲ್ಲದೇವರ ಚರ ಪಟ್ಟಾಧಿಕಾರ ಮಹೋತ್ಸವಜ.17 ರಿಂದ ಶರಣಬಸವೇಶ್ವರ ಪುರಾಣ ಆರಂಭ ಯಶಸ್ವಿಗೆ ಮನವಿ

ಹುಮನಾಬಾದ: ಜ.16:ತಾಲೂಕಿನ ಸುಕ್ಷೇತ್ರ ಹುಡಗಿ ವಿರಕ್ತ ಮಠದ ಚೆನ್ನಮಲ್ಲ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಜನೆವರಿ 17 ರಿಂದ ಆರಂಭವಾಗಿ ಫೆಬ್ರವರಿ 10 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಸಡಗರದಿಂದ ಜರುಗಲಿವೆ.
ಜನೆವರಿ 17ರಂದು ಕಲಬುರ್ಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣವು ಬಸವಕಲ್ಯಾಣ ತಾಲೂಕಿನ ಗಡಿ ಗೌಡಗಾಂವ ಮಠದ ಶಾಂತಿವೀರ ಶಿವಾಚಾರ್ಯರಿಂದ ದಿನಾಲು ಸಾಯಂಕಾಲ 7 ರಿಂದ ರಾತ್ರಿ 9 ಗಂಟೆವರೆಗೆ ಇಲ್ಲಿಯ ಬಸವ ತೀರ್ಥ ವಿದ್ಯಾಪೀಠ ಪ್ರೌಢಶಾಲೆಯ ಆವರಣದಲ್ಲಿ ಅತ್ಯಂತ ಭಕ್ತಿ ಭಾವದಿಂದ ಫೆ.8 ರವರಿಗೆ ಜರಗುವುದು ಎಂದು ಹಿರನಾಗಾಂವ ಮಠದ ಜಯಶಾಂತಲಿಗ ಮಹಾಸ್ವಾಮಿಗಳು ವಿರಕ್ತಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಭೀತ್ತಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತ ನುಡಿದರು.
ಅದೇ ರೀತಿ ಫೆಬ್ರವರಿ 8ರಂದು ಪುರಾಣ ಮಹಾಮಂಗಲ ಹಾಗೂ ಕೊಪ್ಪಳ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಆಶೀರ್ವಚನ ಜರುಗುವುದು.
ಫೆಬ್ರವರಿ .9 ರಂದು ಸುತ್ತೂರು ಜಗದ್ಗುರು ದಿವ್ಯ ನೇತೃತ್ವದಲ್ಲಿ ಧರ್ಮಸಭೆ ನಡೆಯುವದು. ಫೆ.10 ರಂದು ನಿಸರ್ಗ ಕಲ್ಯಾಣ ಮಂಟಪದಲ್ಲಿ ಚೆನ್ನಮಲ್ಲದೇವರ ಚರ ಪಟ್ಟಾಧಿಕಾರ ಮಹೋತ್ಸವವು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು, ಜಿಡಗಾದ ಡಾ. ಮುರುಘರಾಜೇಂದ್ರ ಶ್ರೀಗಳು, ಬಾಲ್ಕೀಯ ಬಸವಲಿಂಗ ಪಟ್ಟದೇವರು, ತಡೋಳಾದ ರಾಜೇಶ್ವರ ಶಿವಾಚಾರ್ಯರು, ಹುಡುಗಿಯ ವಿರೂಪಾಕ್ಷ ಶಿವಾಚಾರ್ಯರು ಸೇರಿದಂತೆ ಮುಂತಾದ ಹಿರಿಯ ಶ್ರೀಗಳು ಹಾಗೂ ಶಾಸಕ ರಾಜಶೇಖರ ಬಿ ಪಾಟೀಲ, ಬಿಜೆಪಿ ಮುಖಂಡ ವಿಜಯಂದ್ರ ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತರಾವ ಖುಬಾ ಇನ್ನು ಮುಂತಾದ ರಾಜಕೀಯ ಧುರಿಣರು ಭಾಗವಹಿಸಲಿದ್ದಾರೆ ಎಂದು ಹಿರನಾಗಾಂವ ಶ್ರೀಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೋಮನಾಥ ಪಾಟೀಲ ಮಾತನಾಡಿ ಹುಡುಗಿ ವಿರಕ್ತ ಮಠವು ಅತ್ಯಂತ ಪುರಾತನ ಮಠಗಳಲ್ಲಿ ಒಂದಾಗಿದೆ. ಆದ್ದರಿಂದ ಶ್ರೀಗಳ ಚರ ಪಟ್ಟಾಧಿಕಾರ ಮಹೋತ್ಸವವು ಅತ್ಯಂತ ಯಶಸ್ವಿಯಾಗಿ ಜರುಗಲು ಎಲ್ಲರೂ ಸಹಕರಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ರಾಜೇಶ್ವರದ ಘನಲಿಂಗ ರುದ್ರಮನಿ ಶಿವಾಚಾರ್ಯರು, ಚೆನ್ನಮಲ್ಲ ದೇವರು, ಹಾಗೂ ಕಂಟೆಪ್ಪ ದಾನಾ, ವೈಜಿನಾಥ ನಂದಿ, ಗುರು ಮುಗಳಿ, ಶೇಖರ ಜೀರಗಿ, ಮಲ್ಲಿಕಾರ್ಜುನ ಸಂಗಮಕರ್,ನಾಗೇಶ ಚನ್ನುರೆ, ಆರ್.ಟಿ.ಓ ಶರಣಯ್ಯ ಸ್ವಾಮಿ, ಸದಾಶಿವ ವಿಭೂತಿ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ದಯಾನಂದ ಸಿಂಧನಕೇರಾ ನಿರೂಪಿಸಿದರೆ ಮೋಹನಸಿಂಗ್ ರಜಪುತ ಸ್ವಾಗತಿಸಿದರು, ರೇವಣಸಿದ್ದ ಸಾತಾ ವಂದಿಸಿದರು.