ಚೆನ್ನದಾಸರ ಸಮುದಾಯದಿಂದ ನೂತನ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಬಳ್ಳಾರಿ, ಜ.11: ನಗರದ ಅಶೋಕ ಕಂಪರ್ಟ್ಸ್ ನಲ್ಲಿ ಚೆನ್ನದಾಸರ ಸಮುದಾಯದಿಂದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಆಯ್ಕೆಯಾದ ಆರು ಜನ ಸಮುದಾಯದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸದಸ್ಯರುಗಳಾದ ಡಿ. ಸೋಮವತಿ ಶಿಡಿಗಿನಮೊಳ ಗ್ರಾಮ ಪಂಚಾಯಿತಿ, ಡಿ. ಉಮಮಹೇಶ್ವರಿ ವಣೆನ್ನೂರು ಗ್ರಾ ಪಂ, ಡಿ. ಆಂಜಿನಮ್ಮ ಎಮ್ಮಿಗನೂರು ಗ್ರಾ ಪಂ, ಡಿ. ರಾಮಣ್ಣ ಮೋಕ ಗ್ರಾ ಪಂ, ಡಿ. ಹೊನ್ನುರ ಸ್ವಾಮಿ ಗಾದಿಗನೂರ್ ಗ್ರಾಪಂ, ಡಿ. ಆಂಜನೇಯ ಜಾಲಿಬೆಂಚಿ , ಶ್ರೀಧರಗಡ್ಡೆ ಗ್ರಾ ಪಂ ಇವರನ್ನು ಬಳ್ಳಾರಿ ಜಿಲ್ಲೆಯ ಚನ್ನದಾಸರ ಮುಖಂಡರುಗಳಾದ ಡಾ.ಜಂಬುನಾಥ, ಪೋಸ್ಟ್ ಹನುಮಂತಪ್ಪ, ಕೆ.ಇ.ಬಿ ಮಹಾದೇವಪ್ಪ, ಕಮಲಿ ಎರಿಸ್ವಾಮಿ, ಮೋಕ ತಿಪ್ಪಯ್ಯ, ಡಿ.ಆರ್ ಸುಂಕಯ್ಯ, ಡಿ.ಷಣ್ಮುಖ, ಕಂಪ್ಲಿ ಸಣ್ಣ ರಂಗಯ್ಯ, ಗಾದಿನೂರು ಸಿದ್ದಪ್ಪ, ವಕೀಲರಾದ ಡಿ ಚಂದ್ರಪ್ಪ, ಡಿ ನಾರಯಣ, ಡಿ ರಾಮಸ್ವಾಮಿ , ಚಂದ್ರ ಮತ್ತು ಡಿ ರಂಗಯ್ಯ ಅಲೆಮಾರಿ ಜಿಲ್ಲಾ ಸಮಿತಿ ಸದಸ್ಯ ಶಿಡಿಗಿನಮೊಳ, ಡಿ ರಾಮಯ್ಯ , ಡಿ. ಶೇಕಣ್ಣ , ಡಿ. ಸೂರ್ಯ ನಾರಯಣ , ಡಿ, ತಿಮ್ಮಯ್ಯ, ಡಿ.ಬಸವರಾಜ್ ಇವರೆಲ್ಲ ನೂತನ ಸದಸ್ಯರಿಗೆ ಶಾಲು ಹೂವಿನಹಾರದೊಂದಿಗೆ ಸನ್ಮಾನ ಮಾಡಿ ಗೌರವಿಸಿದರು.