ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ

ಬೇಕಾಗುವ ಸಾಮಗ್ರಿಗಳು
ಮಟನ್-೧/೪ ಕೆಜಿ ತೊಗರಿ ಬೇಳೆ-೩ ಚಮಚ ದೊಡ್ಡ ಈರುಳ್ಳಿ ೧, ಟೊಮೆಟೊ ೧, ಶುಂಠಿ-ಬೆಳ್ಳುಳ್ಳಿ, ಅರಿಶಿಣ ಪುಡಿ, ಖಾರದ ಪುಡಿ, ನೀರು , ಉಪ್ಪು, ತೆಂಗಿನಕಾಯಿ , ಚಮಚ ಮೆಂತೆ, ಜೀರಿಗೆ, ಕಾಳು ಮೆಣಸು,
ಒಗ್ಗರಣೆಗೆ
ಎಣ್ಣೆ ೨ ಚಮಚ, ಚಕ್ಕೆ, ಲವಂಗ ೨, ಏಲಕ್ಕಿ ೨, ಪಲಾವ್ ಎಲೆ ೧
ಮಾಡುವ ವಿಧಾನ:
ರುಬ್ಬಲು ಬೇಕಾಗುವ ಸಾಮಗ್ರಿ ಹಾಕಿ ರುಬ್ಬಿ. ಈಗ ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಒಬ್ಬಗರಣೆಗೆ ಹೇಳಿದ ಸಾಮಗ್ರಿ ಹಾಕಿ.
ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಸೌಟ್‌ನಿಂದ ಆಡಿಸಿ, ನಂತರ ಟೊಮೆಟೊ, ಕರಿಬೇವು ಹಾಕಿ ೨ ನಿಮಿಷ ಸೌಟ್‌ನಿಂದ ಆಡಿಸಿ
. ನಂತರ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಮಸಾಲೆ ಚೆನ್ನಾಗಿ ಮಿಶ್ರ ಮಾಡಿ.
ತೊಗರಿ ಬೇಳೆ ತೊಳೆದು ರೆಡಿಯಾಗಿ ಇಡಿ. ಮೊದಲು ಮಟನ್ ಹಾಕಿ ೨ ನಿಮಿಷ ಸೌಟ್‌ನಿಂದ ಆಡಿಸಿ, ನಂತರ ಬೇಳೆ ಸೇರಿಸಿ.
ಬೇಕಾದ ಪ್ರಮಾಣಕ್ಕೆ ನೀರು ಹಾಕಿ, ಬೇಳೆ ನೀರಿನಲ್ಲಿ ಮುಳುಗುವಷ್ಟು ನೀರು ಹಾಕಿರಬೇಕು. ನಂತರ೮-೧೦ ವಿಶಲ್ ಹೊಡೆಸಿ.
ನಂತರ ಗ್ಯಾಸ್ ಆಫ್ ಮಾಡಿ, ಕುಕ್ಕರ್‌ನ ಸ್ವಲ್ಪ ತಣ್ಣಗಾದ ಮೇಲೆ ಅದರ ಮುಚ್ಚಳ ತೆಗೆದು ೨ ನಿಮಿಷ ಕುದಿಸಿ, ನಂತರ ರುಬ್ಬಿದ ಮಸಾಲೆ ಹಾಕಿ
ಮೇಲ್ಭಾಗದಲ್ಲಿ ಎಣ್ಣೆಯಂಶ ತೇಲುವಷ್ಟು ಹೊತ್ತು ಕುದಿಸಿ, ನಂತರ ಗ್ಯಾಸ್ ಆಫ್ ಮಾಡಿ ಚಪಾತಿ/ಪರೋಟ ಜೊತೆ ಸರ್ವ್ ಮಾಡಿ