ಚೆಕ್ ವಿತರಣೆ


ಚನ್ನಮ್ಮನ ಕಿತ್ತೂರ,ಡಿ.3:ಬಸವೇಶ್ವರ ದೇವಸ್ಥಾನ ಜೀರ್ನೋದ್ಧಾರಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯವರಿಂದ 1 ಲಕ್ಷ ಚಕ್ ವಿತರಣೆ ನಡೆಯಿತು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸಂಧೀಪ ಅವರು ಕಾರ್ಯಕ್ರಮ ವನ್ನು ದೀಪ ಪ್ರಜ್ವಲನ ಮಾಡಿ ಚಕ್ ವಿತರಿಸಿ ಮಾತನಾಡಿ ಯಾವುದೇ ಕೆಲಸ ಮಾಡಿ, ಅದನ್ನು ಅಚ್ಚು ಕಟ್ಟಾಗಿ ಮಾಡಬೇಕು. ನಾವು ಮಾಡಿದ ಕೆಲಸವನ್ನು ಬೇರೆಯಾವರು ಮೆಚ್ಚಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಕಮೀಟಿ ಅಧ್ಯಕ್ಷ ರುದ್ರಪ್ಪ ಚಕಡಿ ವಹಿಸಿದರು.
ಯೋಜನೆಯ ಮೇಲ್ವಿಚಾರಕರಾದ ಜನಾರ್ಧನ, ಒಕ್ಕೂಟ ಅಧ್ಯಕ್ಷ ಮಂಜುಳಾ ಸಕ್ರೆನ್ನವರ, ನೀಲಮ್ಮಾ ಬೆಂಡಿಗೇರಿ, ಸೇವಾ ಪ್ರತಿನಿಧಿ ರೇಖಾ ಗೊಡಚಿ, ಅಮಿನಾ ಮೋಕಾಸಿ, ದೇವಸ್ಥಾನ ಕಮೀಟಿ ಸದಸ್ಯರಾದ ಮಹಾದೇವಪ್ಪ ಗೊಡಚಿ, ಸಂಜೀವಕುಮಾರ ತಿಲಗರ, ಉಮೇಶ ದೇವಲತ್ತಿ, ಅಶೋಕ ಕಲ್ಯಾಣಿ, ಮಾರ್ಥಾಡ ಕತ್ತಿ, ಸೇರಿದಂತೆ ಅನೇಕರು ಇದ್ದರು.