ಚೆಕ್ ಬೌನ್ಸ್: ಹಣ ಕೇಳಲು ಹೋದವರ ಮೇಲೆ ಹಲ್ಲೆ

ಕಲಬುರಗಿ,ಆ.29-ಚೆಕ್ ಬೌನ್ಸ್ ಆಗಿದ್ದು ಅದರ ಮೊತ್ತದ ಹಣ ನೀಡುವಂತೆ ಕೇಳಲು ಹೋದವರ ಮೇಲೆ ಸಹೋದರ ಮತ್ತು ಸಹೋದರಿ ಹಲ್ಲೆ ನಡೆಸಿರುವ ಘಟನೆ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ಅಂಕಿತಾ ರಾಘವೇಂದ್ರ ಕುಲಕರ್ಣಿ ಅವರ ಫುಡ್ ಪ್ರೊಡೆಕ್ಟ್ ಇದ್ದು, ಇಲ್ಲಿ ಶಶಾಂಕ್ ಎಂಬಾತ ಜೋಳದ ಹಿಟ್ಟು ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ 2833 ಹಾಗೂ 8 ಸಾವಿರ ರೂ.ಸೇರಿ 10,833 ರೂ.ಗಳ ಎರಡು ಚೆಕ್ ನೀಡಿದ್ದ. ಈ ಎರಡು ಚೆಕ್‍ಗಳು ಬೌನ್ಸ್ ಆಗಿದ್ದರಿಂದ ಅಂಕಿತಾ ರಾಘವೇಂದ್ರ ಅವರು ಕೈಲಾಸ ನಗರದಲ್ಲಿರುವ ಶಶಾಂಕ್ ಅವರ ಮನೆಗೆ ಹೋಗಿ ನೀವು ನೀಡಿರುವ ಎರಡು ಚೆಕ್‍ಗಳು ಬೌನ್ಸ್ ಆಗಿದ್ದು ಅದರ ಮೊತ್ತ ನೀಡುವಂತೆ ಶಶಾಂಕ್ ಅವರನ್ನು ಕೇಳಿದ್ದಾರೆ. ಈ ವೇಳೆ ಶಶಾಂಕ್ ಮತ್ತು ಅವರ ಸಹೋದರಿ ಶ್ವೇತಾ ಅವರು ರಾಘವೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಹಣ ನೀಡದೆ ವಾಪಸ್ ಕಳುಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಂಕಿತಾ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.