ಚೆಕ್ ಬೌನ್ಸ್ ಪ್ರಕರಣ:ಶಿರಸ್ತೆದಾರ ಬಂಧನ, ಅಮಾನತು

ಸಿಂಧನೂರು.ನ.೨೩- ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಶಿರಸ್ತೆದಾರ ಅಂಬಾದಾಸ್ ಅಮಾನತು ಆಗಿದ್ದಾರೆಂದು ತಹಶೀಲ್ದಾರ್ ಅರುಣ್ ಕುಮಾರ ದೇಸಾಯಿ ಮಾಹಿತಿ ನೀಡಿದರು.
ಸಿಂಧನೂರು ತಹಶಿಲ್ದಾರ ಕಚೇರಿಯಲ್ಲಿ ಶಿರಸ್ತೆದಾರರಾಗಿದ್ದ ಅಂಬಾದಾಸ್ ಚೆಕ್ ಬೌನ್ಸ್ ಪ್ರಕರಣ ದಾಖಲಾದ ಕಾರಣ ಪೊಲೀಸರು ಅವರನ್ನು ಬಂದಿಸಿದ್ದು, ಕಲಬುರಗಿ ಪ್ರಾದೇಶಿಕ ಆಯುಕ್ತರ ಕಛೇರಿ ಯಿಂದ ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆಂದು ತಿಳಿದುಬಂದಿದೆ.
ರಾಮಣ್ಣ ತಂದೆ ಅಂಬಣ್ಣ ಎಂಬಾತನ ಬಳಿ ೩ ಲಕ್ಷ ರೂ ಸಾಲವನ್ನು ಶಿರಸ್ತೆದಾರ ಅಂಬಾದಾಸ ತೆಗೆದುಕೊಂಡಿದ್ದು , ಅವಧಿ ಮುಗಿದಿದ್ದು ತೆಗೆದುಕೊಂಡ ಸಾಲ ಮರಳಿ ಕೊಡುವಂತೆ ರಾಮಣ್ಣ ಕೇಳಿದಾಗ ಅಂಬಾದಾಸ ಸ್ಟೇಟ ಬ್ಯಾಂಕ ಆಪ್ ಇಂಡಿಯಾ ಚೆಕ್ ನಂ.೨೬೫೨೬೦ ದಿನಾಂಕ ೫ .೧೦.೨೦೨೧ ರಂದು ೩ ಲಕ್ಷದ ಚೆಕ್‌ನ್ನು ರಾಮಣ್ಣನಿಗೆ ನೀಡಿದ್ದರು. ಅಂಬಾದಾಸ ನೀಡಿದ ಚೆಕ್ ಬೌನ್ಸ್ ಆದ ಕಾರಣ ರಾಮಣ್ಣ ನಗರದ ನ್ಯಾಯಾಲಯದಲ್ಲಿ ೪೩೮/೨೦೨೨ ರ ಕಲಂ ೧೩೮ ಅಡಿಯಲ್ಲಿ ಪಕರಣ ಧಾಖಲು ಮಾಡಿದ್ದು ಪ್ರಕರಣದ ಬಗ್ಗೆ ವಾದ ಆಲಿಸಿದ ನ್ಯಾಯಾಧೀಶರು ಸದ್ರಿ ಸರ್ಕಾರಿ ನೌಕರನಿಗೆ ೬ ತಿಂಗಳ ಕಾಲ ಶಿಕ್ಷೆ ವಿಧಿಸಿ,ವಾರೆಂಟ್ ಜಾರಿ ಮಾಡಿದ್ದಾರೆ.