ಚೆಕ್ ಬೌನ್ಸ್ ತಾರಾ ದಂಪತಿಗೆ 1 ವರ್ಷ ಶಿಕ್ಷೆ

ಚೆನ್ನೈ.ಏ೭: ಚೆಕ್ ವಂಚನೆ ಪ್ರಕರಣದಲ್ಲಿ ಚೆನೈ ವಿಶೇಷ ನ್ಯಾಯಾಲಯ ಶರತ್‌ಕುಮಾರ್ ಮತ್ತು ಅವರ ಪತ್ನಿ ರಾಧಿಕಾ ಅವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಟಿ ರಾಧಿಕಾ ಶರತ್‌ಕುಮಾರ್ ಮತ್ತು ಶರತ್‌ಕುಮಾರ್ ಸಹನಟನಾಗಿರುವ ಮ್ಯಾಜಿಕ್ ಫ್ರೇಮ್ಸ್, ವಿಕ್ರಮ್ ಪ್ರಭು ಮತ್ತು ಕೀರ್ತಿ ಸುರೇಶ್ ಅವರೊಂದಿಗೆ ೨೦೧೪ ರಲ್ಲಿ ಚಿತ್ರ ಮಾಡಲು ಯೋಜಿಸಿದ್ದು ಅವರು ರೇಡಿಯನ್ಸ್‌ನಿಂದ ೧.೫ ಕೋಟಿ ರೂ ಹಣ ಪಡೆದುಕೊಂಡಿದ್ದರು.
ಮಾರ್ಚ್ ೨೦೧೫ ರೊಳಗೆ ಹಣವನ್ನು ಹಿಂದಿರುಗಿಸುವುದಾಗಿ ಅವರು ಹೇಳಿದರು. ಆದರೆ ಹಣವನ್ನು ಹಿಂದಿರುಗಿಸಲಿಲ್ಲ ಎನ್ನಲಾಗಿದೆ.