ಚೆಕ್ ಪೋಸ್ಟ್ ನಲ್ಲಿ ಸಿಆರ್ ಪಿಎಫ್ ಸಿಬ್ಬಂದಿಗಳಿಂದ ಕಟ್ಟುನಿಟ್ಟಿನ ತಪಾಸಣೆ

ಜಗಳೂರು.ಏ.೩೦ : ಕ್ಷೇತ್ರದಲ್ಲಿ ತೆರೆಯಲಾಗಿರುವ 5 ಚೆಕ್ ಪೋಸ್ಟ್ ಗಳಲ್ಲಿ ಸಿಆರ್ ಪಿಎಫ್ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ತಪಾಸಣೆ ನಡೆಸುತ್ತಿದ್ದಾರೆ.ಜಗಳೂರು ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ತೆರೆಯಲಾಗಿರುವ 5 ಚೆಕ್ ಪೋಸ್ಟ್ ಗಳಲ್ಲಿ ಸ್ಥಳೀಯ ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಜೊತೆಗೆ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.ಒಂದೊAದು ಚೆಕ್ ಪೋಸ್ಟ್ ಗಳಲ್ಲಿ ನಾಲ್ಕು ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಇವರು ತಮ್ಮ ಕೆಲಸದ ಅವಧಿಯಲ್ಲಿ ಒಂದು ನಿಮಿಷ ಕುಳಿತು ಕೊಳ್ಳದೆ ಚೆಕ್ ಪೋಸ್ಟ್ ನಲ್ಲಿ ಬರುವ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳನ್ನು ಕಟ್ಟು ನಿಟ್ಟಾಗಿ ಪರೀಶಿಲನೆ ನಡೆಸುವುದರ ಮೂಲಕ ತಮ್ಮ ಕಾಯಕ ನಿಷ್ಠೆಯನ್ನು ತೊರುತ್ತಿದ್ದಾರೆ. ಈ ಸಂಧರ್ಭದಲ್ಲಿ ವೆಂಕಟೇಶ್, ಸಿಆರ್ ಪಿಎಫ್ ಸಿಬ್ಬಂದಿಗಳಾದ ರಮೇಶ್, ದೇವಾನಂದ, ಅಜೇಯಪಾಲ್, ಹವುದೇಶ್ ಕುಮಾರ್, ಪೋಲಿಸ್ ದೇಫೆದರ್ ತಿಪ್ಪೇಸ್ವಾಮಿ ಇದ್ದರು.