ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಹೈರಾಣ

ಕೆಂಭಾವಿ :ಎ.11:ರಾಜ್ಯದಲ್ಲಿ ವಿಧಾನ ಸಭೆ ಚುನಾವಣಾ ಘೋಷಣೆಯಾದ ನಿಮಿತ್ಯವಾಗಿ ಜಿಲ್ಲಾಡಳಿತ ನಿತ್ಯ ಸಂಚರಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಚೆಕ್ ಪೆÇೀಸ್ಟ್ಗಳನ್ನು ಸ್ಥಾಪನೆ ಮಾಡಿದೆ. ಆದರೆ ಚೆಕ್ ಪೆÇೀಸ್ಟ್ ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹೈರಾಣಾಗುತ್ತಿರುವುದು ಬೆಳಕಿಗೆ ಬಂದಿದೆ.
ವಲಯದ ಮಲ್ಲಾ ಮತ್ತು ತಳ್ಳಳ್ಳಿ ಗ್ರಾಮಗಳ ಬಳಿ ಚೆಕ್‍ಪೆÇೀಸ್ಟ್ ಸ್ಥಾಪಿಸಲಾಗಿದ್ದು ಮುಖ್ಯವಾಗಿ ಕೂಡಲು ಅಧಿಕಾರಿಗಳಿಗೆ ತಾತ್ಕಾಲಿಕ ಮನೆ ವ್ಯವಸ್ಥೆ ಇಲ್ಲದೆ ಕೇವಲ ನಾಮ್ ಕೆ ವಾಸ್ತೆ ಟೆಂಟ್‍ಗಳಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಜೋರಾದ ಗಾಳಿ ಬೀಸದರೆ ಈ ಟೆಂಟ್‍ಗಳೂ ಹಾರಿಹೋದ ಉದಾಹರಣೆಗಳು ಇವೆ. ಈ ಚೆಕ್‍ಪೆÇೀಸ್ಟ್ ಕೇಂದ್ರಗಳಲ್ಲಿ ಒಬ್ಬ ಅಧಿಕಾರಿ, ಸಹಾಯಕ ಅಧಿಕಾರಿ ಮತ್ತು ಓರ್ವ ಪೆÇಲೀಸ್ ಪೇದೆ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಈ ಮೂರು ಜನ ಅಧಿಕಾರಿಗಳು ಬಿರು ಬಿಸಿಲಲ್ಲಿ ನಿಂತು ವಾಹನಗಳ ತಪಾಸಣೆ ಮಾಡುವ ದೃಶ್ಯ ಕಂಡು ಬರುತ್ತಿದೆ. ಮಲ್ಲಾ ಮತ್ತು ತಳ್ಳಳ್ಳಿ ಗ್ರಾಮಗಳ ರಾಜ್ಯ ಹೆದ್ದಾರಿಗಳ ಮೇಲೆ ತಪಾಸಣ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಅಧಿಕಾರಿಗಳು ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಇಲ್ಲಿ ಹಗಲಿರುಳು ಕೆಲಸ ನಿರ್ವಹಿಸಬೇಕಾಗಿದ್ದು ಕೂಡಲೆ ಇಲ್ಲಿ ತಾತ್ಕಾಲಿಕ ಮನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂಬುದು ಜನತೆಯ ಒತ್ತಾಯವಾಗಿದೆ.