ಚೆಕ್ ಪೋಸ್ಟ್‍ಗಳಿಗೆ ಭೇಟಿ: ಪರಿಶೀಲನೆ

ಲಕ್ಷ್ಮೇಶ್ವರ,ಮೇ29: ಪಟ್ಟಣದ ಪುರಸಭೆಗೆ ನಿನ್ನೆ ಆಗಮಿಸಿದ್ದ ಪೆÇ್ರಬೇಷನರಿ ಉಪವಿಭಾಗಾಧಿಕಾರಿ ಮಹ್ಮದ್ ಖೈಜನ್ ಅವರು ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಹುಬ್ಬಳ್ಳಿ ರಸ್ತೆ, ಸವಣೂರು ರಸ್ತೆ ಹಾಗೂ ಗದಗ ನಾಕಾದ ಚೆಕ್ ಪೆÇೀಸ್ಟ್ ಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಿಗೆ ಹೊರ ಜಿಲ್ಲೆಗಳಿಂದ ಅನಾವಶ್ಯಕವಾಗಿ ವಾಹನಗಳು ಪ್ರವೇಶ ಮಾಡಿದರೆ ಕೋಲಂಕುಷ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮುಖ್ಯಾಧಿಕಾರಿ ಹುಲ್ಲಮನವರ ಅವರು ಪ್ರತಿ ಚೆಕ್ ಪೆÇೀಸ್ಟ್ ಗೆ ಒರ್ವ ಪುರಸಭೆ, ಪ್ರಾ.ಶಿ ಶಿಕ್ಷಕ, ಗ್ರಹರಕ್ಷಕ ದಳ, ಕಂದಾಯ ಇಲಾಖೆ ಸಿಬ್ಬಂದಿ ನಿಯೋಜಿಸಿರುವುದಾಗಿ ಮಾಹಿತಿ ನೀಡಿದರು.
ತಹಶಿಲ್ದಾರ ಎಸ್ ಆರ್ ಸಿದ್ದನಗೌಡರ , ಕಂದಾಯ ನಿರೀಕ್ಷಕ ಖಾತ್ರಾಳ್ ಸೇರಿದಂತೆ ಅನೇಕ ಸಿಬ್ಬಂದಿಗಳು ಇದ್ದರು.