ಚೆಕ್ ಪೋಸ್ಟ್‌ನಲ್ಲಿ ೨.೩೮ ಲಕ್ಷ ನಗದು ವಶ

ಕೋಲಾರ,ಮಾ,೧೭- ವೇಮಗಲ್ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ೭೫ರ ರಾಮಸಂದ್ರ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ಪರ್ಚುನರ್ ಕಾರನ್ನು ಬೆನ್ನಟ್ಚಿದ ವೇಮಗಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ತಂಡ ತಪಾಸಣೆ ಮಾಡಿದಾಗ ೨ ಲಕ್ಷ ೩೮ ಸಾವಿರ ನಗದು ಹಣ, ೧೫ ಟೀ ಶರ್ಟ್, ೩ ಸೀರೆಯನ್ನು ವೇಮಗಲ್ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಮುಳಬಾಗಿಲು ಕ್ಷೇತ್ರದ ಕೊತ್ತೂರು ಮಂಜುನಾಥ್ ಬಣದ ಅಂಜುಬಾಸ್ ಚುನಾವಣಾ ನಿಮಿತ್ತ ಹಂಚಲು ತರುತ್ತಿದ್ದ ವಸ್ತುಗಳನ್ನು ಹಾಗೂ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ವೇಮಗಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಪೋಲಿಸ್ ಪೇದೆ ಮಹೇಶ್, ಮರೇಗೌಡ, ಚಾಲಕ ನಾಗೇಶ್ ತಂಡ ತಪಾಸಣೆ ನಡೆಸುವಲ್ಲಿ ಯಶಸ್ವಿಗೊಂಡಿದೆ.