ಚೆಕ್ ಪೋಸ್ಟ್‍ಗೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ, ಪರಿಶೀಲನೆ

ಚಿಂಚೋಳಿ,ಏ.3- ತಾಲ್ಲೂಕಿನ ಗಡಿಭಾಗ ಮಿರಿಯಾಣ ಚೆಕ್‍ಪೆÇೀಸ್ಟ್‍ಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಟಧಿಕಾರಿ ಅಕ್ಷಯ ಕುಮಾರ್ ಹಾಕಯ್ ದಾಖಲೆಗಳ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳು ಖುದ್ದಾಗಿ ಬಸ್ ಮತ್ತು ಲಾರಿ ಇನ್ನಿತರ ವಾಹನಗಳನ್ನು ತಪಾಸಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಚೆಕ್ ಪೆÇೀಸ್ಟ್ ಮುಖಂತರ ಹಾದುಹೋಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲೇಬೇಕು ಎಂದು ಸೂಚಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್ ಪೆÇೀಸ್ಟಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಚೆಕ್ ಪೆÇೀಸ್ಟಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ, ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುವ ಎಲ್ಲ ವಾಹನ ತಪಾಸಣೆ ಮಾಡುವಂತೆ ಚೆಕ್ ಪೆÇೀಸ್ಟ್ ಸಿಬ್ಬಂದಿಗೆ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರುನುಮ್,ಜಿಲ್ಲಾ ಪೆÇೀಲಿಸ್ ವರಿಷ್ಟಾಧಿಕಾರಿ ಎಮ್ ಅಕ್ಷಯ್ ಕುಮಾರ ಹಾಕಯ್, ಸೇಡಂ ಂಅ ಹಾಶಪ್ಪ ಪೂಜಾರಿ,ತಹಸೀಲ್ದಾರ್ ಮಲ್ಲಿಕಾರ್ಜುನ್ ಅರಕೇರಿ,ಡಿವೈಎಸ್ಪಿ ಸಂಗಮನಾಥ್ ಹಿರೇಮಠ್, ಸಿಪಿಐ ಎಲ್ ಹೆಚ್ ಗೌಂಡಿ , ಇಔ ಶಂಕರ್ ರಾಠೋಡ್,ಮಿರಿಯಾಣ ಪಿಎಸ್ ಐ ಶಿವರಾಜ್ ಪಾಟೀಲ, ಅಬಕಾರಿ ಸಿಪಿಐ ಮಲ್ಲಿಕಾರ್ಜುನ್ ಗಸ್ತಿ, ಪಿಡಿಓ ದಶರಥ ಪಾತ್ರೆ ಮತ್ತು ಪೆÇಲೀಸ್ ಸಿಬ್ಬಂದಿಗಳು ಗೃಹ ರಕ್ಷಕ ಸಿಬ್ಬಂದಿಗಳು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು,