ಚೆಕ್ ಪೋಸ್ಟಗಳಿಗೆ ಭೇಟಿ

ಗದಗ, ಮಾ 31 : ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ 2023ಕ್ಕೆ ಕುರಿತಂತೆ ಈಗಾಗಲೇ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾದ್ಯಂತ 18 ಸ್ಥಳಗಳಲ್ಲಿ ಚೆಕ್ ಪೆÇೀಸ್ಟಗಳನ್ನು ತೆರೆದು ನಿರಂತರವಾಗಿ ವಾಹನಗಳ ತಪಾಸಣೆ ಜರುಗಿಸಲಾಗುತ್ತಿದೆ.
ಗೋನಾಳ ಚೆಕ್ ಪೆÇೀಸ್ಟಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ಅವರು ಅನೀರಿಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು. ಚೆಕ್ ಪೆÇೀಸ್ಟನಲ್ಲಿ ನಡೆಸಲಾಗುವ ತಪಾಸಣೆ ಕುರಿತು ಮಾಹಿತಿ ಪಡೆದ ಅವರು. ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮಧ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವದನ್ನು ಪರಿಶೀಲಿಸಬೇಕು. ದಾಖಲೆ ರಹಿತ ಸಾಮಗ್ರಿ, ನಗದು ದೊರೆತಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್ ಪೆÇೀಸ್ಟನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ವಾಗೀಶ ಪಂಡಿತಾರಾಧ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾ ಧರ್ಮರ ಸೇರಿದಂತೆ ಚೆಕ್ ಪೆÇೀಸ್ಟ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.