ಚೆಕ್ ಪೊಸ್ಟ್ ಗಳಲ್ಲಿ ಕಟ್ಟೆಚ್ಚರ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.25: ತಾಲೂಕಿನ ಚಿಕ್ಕಜಂತಗಲ್ ಚೆಕ್ ಪೊಸ್ಟ್  ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಭೇಟಿ ನೀಡಿ ವಾಹನಗಳ ತಪಾಸಣೆ ನಡೆಸಿದರು.
ತಾಪಂ ಇಓ ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, ಈ ರಸ್ತೆ ಮಾರ್ಗವಾಗಿ ಬರುವ ಎಲ್ಲ ವಾಹನಗಳ ತಪಾಸಣೆಯನ್ನು ಚೆಕ್ ಪೊಸ್ಟ್ ಸಿಬ್ಬಂದಿಗಳು ಸರಿಯಾಗಿ ನಡೆಸಬೇಕು. ದಾಖಲೆಗಳಿಲ್ಲದೇ ಸಾಗಣೆ ಮಾಡುವ ನಗದು, ಚಿನ್ನಾಭರಣ, ಸಾಮಾಗ್ರಿಗಳ ಪರಿಶೀಲಿಸಬೇಕು. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಚೆಕ್ ಪೊಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು. ಬೈಕ್ , ಕಾರ್, ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ಗಳ ಪರಿಶೀಲನೆ ನಡೆಸಬೇಕು ಎಂದರು. ಈ ವೇಳೆ ಗ್ರಾಪಂ ಸಿಬ್ಬಂದಿಗಳಾದ ಆನಂದ, ಚೆಕ್ ಪೊಸ್ಟ್ ಸಿಬ್ಬಂದಿಗಳು ಇದ್ದರು.