
ಬಳ್ಳಾರಿ,ಏ.6: ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 10 ಲಕ್ಷ ನಗದು ಹಣ ಸೇರಿ 131ಲೀಟರ್ (ರೂ.50,268 ಸಾವಿರ ಬೆಲೆಬಾಳುವ) ಮದ್ಯವನ್ನು ಇಂದು ಚೆಕ್ ಪೋಸ್ಟ್ ಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಹೇಳಿದ್ದಾರೆ.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 43 ಫ್ಲೈಯಿಂಗ್ ಸ್ವ್ಯಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡ ಕೆಲಸ ನಿರ್ವಹಿಸುತ್ತಿವೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಟಾಟಿಕ್ ಸರ್ವೈವ್‍ಲೆನ್ಸ್ ಟೀಮ್(ಎಸ್‍ಎಸ್‍ಟಿ) ತಂಡವು ಪರಿಶೀಲನೆ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 10 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ.
ಅಬಕಾರಿ ಇಲಾಖೆಯಿಂದ 102.60 ಲೀಟರ್ ಮದ್ಯ(37,668 ಸಾವಿರ ರೂ. ಬೆಲೆಬಾಳುವ) ಹಾಗೂ ಪೊಲೀಸ್ ಇಲಾಖೆಯಿಂದ 28.53 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.