ಚೆಕ್‍ಡ್ಯಾಂನಲ್ಲಿ ಮಳೆನೀರು ಸಂಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ.31: ನರೇಗಾ ಯೋಜನೆಯಲ್ಲಿ ನಿರ್ಮಿಸಿದ ಚೆಕ್‍ಡ್ಯಾಂನಲ್ಲಿ ಮಳೆನೀರು ಸಂಗ್ರಹಗೊಂಡಿದೆ.
ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 193 ಪುರುಷರು, 473 ಮಹಿಳೆಯರು ಸೇರಿದಂತೆ ಒಟ್ಟು 666 ಕೂಲಿ ಕಾರ್ಮಿಕರು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಸೋಮವಾರ ರಾತ್ರಿ ಸುರಿದ ಮಳೆಗೆ ಚೆಕ್‍ಡ್ಯಾಂನಲ್ಲಿ ನೀರು ಸಂಗ್ರವಾಗಿರುವುದು ಕಾರ್ಮಿಕರ ಶ್ರಮಕ್ಕೆ ಫಲದೊರತಂತಾಗಿದೆ ಸರ್ಕಾರದ ಈ ಕ್ರಮ ರೈತರಿಗೆ ನೆರವಾಗಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದರು.

One attachment • Scanned by Gmail