ಚೂರಿಯಿಂದ ಇರಿದು ಮಹಿಳೆಕೊಲೆ

ಹರಿಹರ.ಡಿ. ೩೦; ಚೂರಿಯಿಂದ ಇರಿದು ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ರಸ್ತೆ ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದ ಬಳಿ ನಡೆದಿದೆ ರೇಖಾ( 25) ಕುರುಬರ ಬೀದಿ ಮುದ್ದಮ್ಮನ ಗುಡಿ ಹತ್ತಿರ ನಿವಾಸಿ ಕೊಲೆಗೆ ಈಡಾದ ಮಹಿಳೆ.  ನಿನ್ನೆ ಸಂಜೆ 6 30 ಕ್ಕೆ ತರಕಾರಿ ವ್ಯಾಪಾರ ಮುಗಿಸಿಕೊಂಡು ತೆರಳುತ್ತಿರುವ ಸಂದರ್ಭದಲ್ಲಿ ಚೇತನ್ ಎಂಬ (25) ಯುವಕ ರೇಖಾಳಿಗೆ ಮುಖ ಕುತ್ತಿಗೆ ಕಾಲು ಎದೆಭಾಗಕ್ಕೆ ಮತ್ತು ಇತರೆ ಭಾಗಗಳಿಗೆ ಮನಬಂದಂತೆ ಚಾಕುವಿನಿಂದ ಚುಚ್ಚಿ  ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದ ತಕ್ಷಣ ಹರಿಹರ ಪೋಲಿಸರು ಕೊಲೆಮಾಡಿದ ವ್ಯಕ್ತಿಯನ್ನು ಕೆಲವೇ ಕ್ಷಣಗಳಲ್ಲಿ ಬಂಧಿಸಿದ್ದಾರೆ ಯಾವ ಕಾರಣಕ್ಕಾಗಿ ಮಹಿಳೆಯನ್ನ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿಲ್ಲ ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಹನಮಂತರಾಯ್. ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಉಪ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ .ವೃತ್ತ ನಿರೀಕ್ಷಕ ಶಿವಪ್ರಸಾದ್ ಎಂ ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ್.ಭೇಟಿ ನೀಡಿ ಪರಿಶೀಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ