ಚೂಡಾಮಣಿಗೆ ಡಾಕ್ಟರೇಟ್ ಪದವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ , ಫೆ 29;ನಗರದ  ಸರಳಾದೇವಿ  ಕಾಲೇಜಿನಲ್ಲಿ ಇತಿಹಾಸದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಚೂಡಾಮಣಿ ಅವರಿಗೆ ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಪಿಎಚ್. ಡಿ ಪದವಿಯನ್ನು ಘೋಷಿಸಿದೆ.
 ಅವರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಹಂಗಾಮಿ ಕುಲಪತಿ ಡಾ. ಅನಂತ ಎಲ್ . ಝಂಡೇಕರ್ ಅವರ ಮಾರ್ಗದರ್ಶನದಲ್ಲಿ.              ‘  ಕರ್ನಾಟಕ ಕಾನೂನು ವ್ಯವಸ್ಥೆ ಐತಿಹಾಸಿಕ ಅಧ್ಯಯನ 1800 – 1948 ‘ ( ಬಳ್ಳಾರಿ ಪ್ರದೇಶವನ್ನು ಅನುಲಕ್ಷಿಸಿ ) ಎಂಬ ಶೀರ್ಷಿಕಡಿಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ  ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ನೀಡಿದೆ.