ಚು.ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಮೇಯರ್

ಬೆಂಗಳೂರು, ನ.3- ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ‌ ಕೇಳಿಬಂದಿದೆ.

ಚುನಾವಣೆಯ ಮತದಾನ ಪ್ರಕ್ರಿಯೆ ದಿನದಂದು ಹೊರಗಿನವರಿಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವೇಶವಿಲ್ಲ ಎಂದು ಚುನಾವಣಾ ಆಯೋಗದ ಸ್ಪಷ್ಟ ಅದೇಶವಿದ್ದರೂ, ಪದ್ಮಾವತಿ ಇದನ್ನು ಉಲಂಘಿಸುತ್ತಿದ್ದಾರೆ ಎನ್ನಲಾಗಿದೆ.

ಆರ್​ಆರ್ ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 38 ಎಚ್​ಎಂಟಿ ವಾರ್ಡ್ ನಲ್ಲಿ ಪದ್ಮಾವತಿ ಕಾಣಿಸಿಕೊಂಡಿದ್ದು, ಮತಗಟ್ಟೆಗಳ ಸಮೀಪವೂ ಅವರು ಪ್ರವೇಶಿಸಿದ್ದಾರೆ.ಇನ್ನೂ, ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.