ಚು. ಆಯೋಗದ ವಿರುದ್ಧ ಇಮ್ರಾನ್ ವಾಗ್ದಾಳಿ

ಇಸ್ಲಮಾಬಾದ್,ಆ.೪-ಪಿಟಿಐ ಪಕ್ಷ ನಿಷೇಧಿತ ೩೪ ಸಂಘಟನೆಗಳಿಂದ ದೇಣಿಗೆ ಪಡೆದಿದೆ ಎನ್ನುವ ಪಾಕಿಸ್ತಾನ ಚುನಾವಣಾ ಆಯೋಗದ ಹೇಳಿಕೆ ವಿರುದ್ದ ಇಮ್ರಾನ್ ಖಾನ್ ಸಮರ ಸಾರಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಮುಂದಾಗಿದ್ದು ಪ್ರತಿಭಟನೆ ವೇಳೆ ಪಿಟಿಐ ಪಕ್ಷದ ಕಾರ್ಯಕರ್ತರನ್ನು ಸರ್ಕಾರ ಬಂಧಿಸಿದರೆ ಇಸ್ಲಮಾಬಾದ್‌ಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅವರು ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಬಲಪ್ರಯೋಗ ಮಾಡಿದರೆ, ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಂದು ಎಚ್ಚರಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿರುವ ಚುನಾವಣಾ ಆಯೋಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ವಿರುದ್ಧ ಪಾಕಿಸ್ತಾನ ಚುನಾವಣಾ ಆಯೋಗದ ತೀರ್ಪು, ಪಕ್ಷ ನಿಷೇಧಿತ ಮೂಲಗಳಿಂದ ಹಣ ಪಡೆದಿದೆ ಎಂದು ಖಾನ್ ಅವರನ್ನು ಕೆರಳಿಸಿದೆ.
ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕಿದರೆ ಆಡಳಿತಾರೂಢ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ರಶೀದ್ ಬೆದರಿಕೆ ಹಾಕಿದ್ದಾರೆ.