ಕುಂದಗೋಳ ಮಾ. 24 : ಅಭಿನವ ಬಸವಣ್ಣಜ್ಜನವರ ಸಾನಿದ್ಯದಲ್ಲಿ ನಾಳೆ ಮಾ. 25 ರಂದು ಜರುಗುವ 5 ನೇ ತಾಲೂಕು ಚುಟಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾದ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಜಿ.ಡಿ.ಘೋರ್ಪಡೆ ಅವರನ್ನು ರಾಜ್ಯ ಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ತಾಲೂಕ ಚುಸಾಪ ಘಟಕದ ವತಿಯಿಂದ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಹಲವಾರು ವರ್ಷಗಳ ಕಾಲ ಪತ್ರಕರ್ತರಾಗಿ ತಾಲೂಕಾ ಪತ್ರಕರ್ತ ಸಂಘದ ಅದ್ಯಕ್ಷರಾಗಿ ಕಾರ್ಯನಿರ್ವಸಿ, ಸುಮಾರು 16 ಸಂಪಾದಕೀಯ ಪುಸ್ತಕಗಳನ್ನು ಹಾಗೂ 6 ಕವನ ಸಂಕಲನಗಳ ವಿಮರ್ಶೆಗಳು 3 ಕವನ ಸಂಕಲನಕ್ಕೆ ಮುನ್ನುಡಿ 2ಕವನ ಸಂಕಲನಕ್ಕೆ ಬೆನ್ನುಡಿ ಹಾಗೂ 2 ಸ್ವ ರಚಿತ ಕವನ ಸಂಕಲನಗಳು1ಕಥಾ ಸಂಕಲನ 2 ಸ್ಮರಣ ಸಂಚಿಕೆಗಳು 2 ಎರಡು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿ 1 ಕವನ ಸಂಕಲನ ಬರವಣಿಗೆಯ ಹಂತದಲ್ಲಿ ಇವೆ ಅವರ ಸಾಹಿತ್ಯ ಸೇವೆ ಹಾಗೂ ಕನ್ನಡ ಸೇವೆಯನ್ನು ಗುರುತಿಸಿ ಸರ್ವಾನು ಮತದಿಂದ ಘೋರ್ಪಡೆಯವರನ್ನು ಆಯ್ಕೆಮಾಡಲಾಗಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ತಾಲೂಕು ಚುಸಾಪ ಅಧ್ಯಕ್ಷ ವೈ. ಡಿ. ಹೊಸೂರ ತಿಳಿಸಿದರು.