ಚುನಾವಣೆ ಹೋಳಿ ಹಬ್ಬದಂತೆ ಆಚರಿಸಿ – ವಚನಾನಂದ ಶ್ರೀ

ದಾವಣಗೆರೆ.ಜ.೩; ಜನವರಿ 14 ಮತ್ತು 15 ರಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜರುಗುವ ಹರ ಜಾತ್ರಾ ಮಹೋತ್ಸವ ನಿಮಿತ್ತ ಜಗದ್ಗುರು ಶ್ರೀ  ವಚನಾನಂದ ಮಹಾಸ್ವಾಮಿಗಳು ಉಚ್ಚoಗಿದುರ್ಗದ ಚತುರ್ದಶಿ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ದರ್ಶನದಲ್ಲಿ ಮಾತನಾಡಿ ಚುನಾವಣೆಯನ್ನು ಹೋಳಿಹಬ್ಬದಂತೆ ಆಚರಿಸಿ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಬಣ್ಣವನ್ನು ಎರಚುವುದು ಸಾಮಾನ್ಯವಾಗಿದೆ. ಹೋಳಿ ಹಬ್ಬ ಮುಗಿದ ಮೇಲೆ ಪ್ರತಿಯೊಬ್ಬರೂ ತಮಗೆ ಹಾಕಿದ ಬಣ್ಣವನ್ನು ತೊಳೆದುಕೊಳ್ಳುವಂತೆ ಚುನಾವಣೆ ಮುಗಿದ ಮೇಲೆ ದ್ವೇಷವನ್ನು ಬಿಟ್ಟು ಗ್ರಾಮದ ಎಲ್ಲರೂ ಸಹೋದರರಂತೆ ಬಾಳಿ ಎಂದು ತಿಳಿಸಿದರು.ಜನವರಿ 14,15, ರಂದು ಎಲ್ಲಾ ಸಮಾಜದವರೂ ಹರ ಜಾತ್ರೆ ಬನ್ನಿ ಎಂದು ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು..