ಚುನಾವಣೆ ಹಿನ್ನೆಲೆ: ಆಲಮಟ್ಟಿ ಉದ್ಯಾನವನಗಳೆಲ್ಲ ಬಂದ್ಗಾರ್ಡನ್ ಕ್ಲೋಸ್…ಭಣಭಣ…ರಣರಣ !!!

ಆಲಮಟ್ಟಿ : ಮೇ.11:ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಅತ್ಯಾಕರ್ಷಕ ಚಿತ್ತಾರದ ವೈವಿಧ್ಯಮಯ ಉದ್ಯಾನವನಗಳೆಲ್ಲವೂ ಒಂದೆಡೆ ಖಾಲಿಖಾಲಿ…! ಇನ್ನೊಂದೆಡೆ ಜನ,ವಾಹನಗಳ ವಿಪರೀತ ಸಂಚಾರದಿಂದ ತುಳಿತಕ್ಕೊಳಗಾಗುತ್ತಿದ್ದ ಸುಂದರ ರಸ್ತೆಗಳೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟು ಪ್ರಶಾಂತ,ಪ್ರಸನ್ನಮಯ…! ಒಂದು ದಿನದ ಮಟ್ಟಿಗೆ ಅವುಗಳಿಗೆಲ್ಲ ಕೊಂಚು ರಿಲೀಫ್…! ಅಕ್ಷರಶಃ ಇಲ್ಲಿ ಸಂಪೂರ್ಣ ಕಫ್ರ್ಯೂ ವಿಧಿಸಿದಂಥ ನೋಟ ಅನಾವರಣ…!

ಇಂಥದೊಂದು ದೃಶ್ಯಾವಳಿ ಬುಧವಾರ ಉದ್ಯಾನ ನಗರಿ ಆಲಮಟ್ಟಿಯಲ್ಲಿ ಕಂಡು ಬಂತು !

ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಬುಧವಾರ ಮತದಾನ ಕರ್ತವ್ಯಕ್ಕಾಗಿ ಇಲ್ಲಿನ ಸುಪ್ರಸಿದ್ಧ ಎಲ್ಲ ಉದ್ಯಾನವನಗಳನ್ನು ಬಂದ್ ಮಾಡಲಾಗಿತ್ತು. ಈ ಕುರಿತು ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮ ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಆದೇಶ ಹೊರಡಿಸಿ ಪ್ರವಾಸಿಗರು,ನಾಗರಿಕರು ಬಂದ್ ಗೆ ಸಹಕರಿಸುವಂತೆ ಕೋರಿದ್ದರು.

ಆ ಹಿನ್ನೆಲೆಯಲ್ಲಿ ಉದ್ಯಾನವನಗಳೆಲ್ಲ ಬಂದಾಗಿ ಮುಚ್ಚಲ್ಪಟ್ಟ ಕಾರಣ ಇತ್ತ ಪ್ರವಾಸಿಗರು,ಸಾರ್ವಜನಿಕರು ಸುಳಿಯಲಿಲ್ಲ. ಗಾರ್ಡನ್ ಗಳಲ್ಲಿ ಹೆಜ್ಜೆ ಹಾಕಲು ಪ್ರವೇಶ ಇಲ್ಲದ್ದರಿಂದ ಎಲ್ಲೆಲ್ಲೂ ನಿರ್ಜನ ವಾತಾವರಣ ನಿಮಾ9ಣವಾಗಿತ್ತು. ಹಗಲು ಹೊತ್ತಿನಲ್ಲಿ ಸದಾ ಜನರ ಒಡನಾಟದಲ್ಲಿ ಪುಳುಕು ವಯ್ಯಾರ ತೋರ್ಪಡಿಸಿ ಹಸಿಹಸಿಯಾಗಿ ನಲಿದು ಅರುಳುತ್ತಿದ್ದ ಸಸ್ಯಶಾಮಲೆ ಮರಗಳೆಲ್ಲ ನಿಶಬ್ದತೆಯಿಂದ ನಿಸರ್ಗದತ್ತ ಮುಖ ಮಾಡಿದ್ದವು. ಉದ್ಯಾನವನಗಳ ಒಡಲಾಳದಲ್ಲಿ ನಿತ್ಯ ಒಂಥರ ಹೊಸ ಲೋಕ ಅನಾವರಣಗೊಳ್ಳುತ್ತಿತ್ತು. ಪೋಟೋ ಕ್ಲಿಕ್ ದ ಸೌಂಡ್, ಸೆಲ್ಫಿ ನಗುವಿನ ಸದ್ದು, ಚಿಣ್ಣರ ಚಿಲಿಪಿಲಿ ಹೋಶ್,ಜೋಸ್, ಕೂಗಾಟ,ಚಿರಾಟ,ಹಾರಾಟ,ಸಂತಸ,ಖುಷಿಯ ಅಲೆಗಳ ನಿನಾದ ಮಾರ್ದನಿಸುತ್ತಿದ್ದವು. ಎಲ್ಲೆಡೆ ಹೊಸ ಪ್ರವಾಸಿ ಜನರ ಕಿಕ್ಕಿರಿದ ಓಡಾಟದಿಂದ ಗಾರ್ಡನ್ ಗಳಲ್ಲಿ ಸಂಭ್ರಮ,ಸಡಗರ ಕಳೆಗಟ್ಟುತ್ತಿತ್ತು. ಆದರೆ ಬುಧವಾರ ಎಲೆಕ್ಷನ್ ಮತದಾನದ ಎಫೆಕ್ಟ್ ನಿಮಿತ್ಯ ಇಂಥ ರಸಮಯ ದೃಶ್ಯ ವೈಭವಗಳೆಲ್ಲೂ ಕಾಣಲಿಲ್ಲ ! ಗಾರ್ಡನ,ರಸ್ತೆ ಗಳಿಗೆ ವಿರಾಮ ಕಲ್ಪಿಸಲಾಗಿತ್ತು.ಹೀಗಾಗಿ ಜನದಟ್ಟಣೆಯ ತಾಪತ್ರಯವಿಲ್ಲದೇ ಉದ್ಯಾನವನಳು,ಸಂಗೀತ ಕಾರಂಜಿ ಲೇಸರ್ ಶೋ,ತ್ರೀಡಿ ಝೇಂಕಾರ ಇತರೆ ಗಾರ್ಡನ್ ವ್ಯಾಪ್ತಿಯಲ್ಲಿನ ಪ್ರವಾಸಿ ಸ್ಪಾಟ್ ಗಳೆಲ್ಲ ತಮ್ಮ ಸುಗಂಧ ಪರಿಮಳದ ವಯ್ಯಾರ ಪ್ರದರ್ಶಿಸದೇ ನಿರವಮೌನ ತಾಳಿ ನಿಸ್ತಂತು ಅಗಿದ್ದವು ! ಸ್ಥಳೀಯ, ಸುತ್ತಮುತ್ತಲಿನ ಜನ ಪ್ರಜಾ ಹಬ್ಬದಲ್ಲಿ ತಮ್ಮ ಹಕ್ಕು ಚಲಾಯಿಸುವ ಸಂಭ್ರಮದಲ್ಲಿ ಬಿಜಿ ಅಗಿದ್ದರು. ಮುಂಜಾನೆಯಿಂದ ಉದ್ಯಾನವನ ಎದುರಿನ ರಸ್ತೆ ಜನರ,ವಾಹನಗಳ ಸಂಚಾರ ಇಲ್ಲದೇ ಭಣಗುಡುತ್ತಿದ್ದವು. ಮಧ್ಯಾಹ್ನವಂತೂ ಭೀಕರ ರಣಗುಡುತ್ತಿದ್ದವು.ಇತ್ತ ಗಾರ್ಡನ್ ಗಳು ಒಣಗೊಡುತ್ತಾ ಜನತೆಯ ದರ್ಶನ ಕಾಣದೇ ಗೋಣಗುತ್ತಿದ್ದವು. ಸಣ್ಣ ಪುಟ್ಟ ಇಲ್ಲಿ ನಡೆಯುತ್ತಿದ್ದ ವ್ಯಾಪಾರ ನಿಂತು ಹೋಗಿತ್ತು.