ಚುನಾವಣೆ ಹಿನ್ನಲೆ ಭದ್ರತಾಪಡೆಯಿಂದ ಪಥಸಂಚಲನ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.06:  ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಿಮಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ನ್ಯಾಯಸಮ್ಮತವಾಗಿ, ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಬಸಾಪಟ್ಟಣದಲ್ಲಿ ಪಥಸಂಚಲನ ಜರುಗಿತು. ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಪ್ಯಾರಾ ಮಿಲಿಟರಿ ತುಕಡಿ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಗ್ರಾಮದ 5 ವಾರ್ಡ್ ಗಳಲ್ಲಿ ಪಥಸಂಚಲನ ನಡೆಸಿದರು.
ಗಂಗಾವತಿ ನಗರದಲ್ಲಿ ಪಥಸಂಚಲನ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ನ್ಯಾಯಸಮ್ಮತವಾಗಿ, ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಥಸಂಚಲನ ಎ.ಸಿ ಬಸವಣೆಪ್ಪ ಕಲಶೇಟ್ಟಿ ಚಾಲನೆ ನೀಡಿದರು.
ನಗರದ ಸಿ.ಬಿ.ಎಸ್. ವೃತ್ತದಿಂದ ಆರಂಭವಾದ ಫಥಸಂಚಲನ, ಮಹಾವೀರ ವೃತ್ತ, ಗಾಂಧಿ ವೃತ್ತ, ಮಾರ್ಗವಾಗಿ ದುರುಗಮ್ಮ ಗುಡಿ ಮಾರ್ಗವಾಗಿ ನೀಲಕಂಠೇಶ್ವರ ವೃತ್ತ, ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮೂಲಕ ಪೋಲೀಸ್ ಠಾಣೆ ವರೆಗೂ ನಡೆಸಿದರು. ಈ ವೇಳೆ ಡಿವೈಎಸ್ ಪಿ ಎಚ್ ಶೇಖರಪ್ಪ, ತಹಶೀಲ್ದಾರ್ ಮಂಜುನಾಥ, ಪಿ ಐ ಅಡಿವೇಶ ಎನ್. ಗುದಿಗೊಪ್ಪ, ಕಮಾಂಡರ್ ಶಿವಬಸಪ್ಪ ಸೇರಿದಂತೆ ಅನೇಕರು ಇದ್ದರು.