ಚುನಾವಣೆ ಹಬ್ಬ ಕಡ್ಡಾಯ ಮತದಾನ ಮಾಡಿ

ಸಿಂಧನೂರು,ಏ.೦೧- ೨೦೨೩ ರ ಚುನಾವಣೆಯ ಹಬ್ಬದಲ್ಲಿ ಎಲ್ಲರು ಕಡ್ಡಾಯವಾಗಿ ತಪ್ಪದೆ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಚುನಾವಣೆ ಅಧಿಕಾರಿ ಮಹೇಶ ಪೋತದಾರ ತಿಳಿಸಿದರು.
ತಹಸೀಲ್ದಾರ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಮಹೇಶ ಪೋತೇದಾರ್ ಎಚ್ಚರಿಕೆ ನೀಡಿದರು.
ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ೧೧೫೮೧೦ ಪುರುಷರು, ೧೨೧೧೧೫ ಮಹಿಳೆಯರು, ೨೧ ಇತರೆ ಸೇರಿ ಒಟ್ಟು ೨೩೬೯೪೬ ಮತದಾರರಿದ್ದಾರೆ. ಮರಣ ಹೊಂದಿದವರು ೭೭೫೭, ಡಬಲ್ ಮತದಾರರು ೧೦೯೫೮ ಸೇರಿ ೧೮ ಸಾವಿರ ಮತದಾರರು ಪಟ್ಟಿಯಿಂದ ಡಿಲೀಟ್ ಆಗಿದ್ದಾರೆ. ವೋಟರ್ ಐಡಿಗೆ ಶೇ.೭೭ ಪ್ರತಿಶತ ಆಧಾರ್ ಲಿಂಕ್ ಆಗಿದೆ. ೧೧೧೨೯ ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದರು.
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೬೯ ಮತಗಟ್ಟೆಗಳಿವೆ. ಅದರಲ್ಲಿ ೬೫ ಸೂಕ್ಷ್ಮ, ೨೦೪ ಸಾಮಾನ್ಯ, ೫ ವಲ್ಲರೇಬಲ್ ಬೂತ್ ಇವೆ. ೫ ಪ್ಲೇಯಿಂಗ್ ಸ್ಕ್ವಾಯಿಡ್ ಟೀಮ್, ೩ ವಿಡಿಯೋ ತಂಡ, ೩ ಎಸ್.ಎಸ್.ಟಿ ತಂಡ, ೨೧ ಸೆಕ್ಟರ್ ಆಫೀಸರ್, ನಗರ ನೋಡಲ್ ಅಧಿಕಾರಿಯಾಗಿ ನಗರಸಭೆ ಪೌರಾಯುಕ್ತ, ಗ್ರಾಮೀಣ ನೋಡಲ್ ಅಧಿಕಾರಿಯಾಗಿ ತಾ.ಪಂ ಇಓ ನೇಮಕವಾಗಿದ್ದಾರೆ. ಸಿ ವಿಜಲ್ ಆಪ್ ಡೌನ್ಲೋಡ್ ಮಾಡಿಕೊಂಡು ಸಾರ್ವಜನಿಕರು ದೂರು ನೀಡಬಹುದು. ಅಲ್ಲದೆ ತಾಲ್ಲೂಕು ಮಟ್ಟದ ಲ್ಯಾಂಡ್ ಲೈನ್ ನಂಬರ್ ೦೮೫೩೫೨೨೦೧೫೧, ಟೋಲ್ ಫ್ರೀ ಹೆಲ್ಪ ಲೈನ್ ನಂಬರ್ ೧೯೫೦ ಆಗಿದೆ ಎಂದು ತಿಳಿಸಿದರು.
ನಂತರ ಸಹಾಯಕ ಚುನಾವಣಾ ಅಧಿಕಾರಿ ಅರುಣ್ ಎಚ್.ದೇಸಾಯಿ ಮಾತನಾಡಿ, ೧೩ ರಿಂದ ೨೦ ರವೆರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆದರಿಂದ ಪತ್ರಿಕೆ, ಮಾಧ್ಯಮ ಹಾಗೂ ಸೋಶಿಯಲ್ ಮಿಡಿಯಾದವರಯ ಪೇಡ್ ಮತ್ತು ಫೇಕ್ ನ್ಯೂಸ್ ಮಾಡಬಾರದು. ನೀತಿ ಸಂಹಿತೆ ಉಲ್ಲಂಘಿಸಿದರೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಶೇ.೪೦ ರಷ್ಟು ಅಂಗವಿಕಲತೆ ಹೊಂದಿರುವವರು ೨೬೯೪ ಹಾಗೂ ೮೦ ವರ್ಷ ಮೇಲ್ಪಟ್ಟವರು ೩೦೨೩ ಜನರಿದ್ದು, ಇವರು ಮನೆಯಲ್ಲಿ ಇದ್ದು ಮತದಾನ ಮಾಡಲು ಅವಕಾಶವಿದೆ. ಅಭ್ಯರ್ಥಿಗಳ ಖರ್ಚಿನ ಬಗ್ಗೆ ನಿಗಾವಹಿಸಲಾಗುವುದು. ಒಬ್ಬ ಅಭ್ಯರ್ಥಿ ರೂ.೪೦ ಲಕ್ಷ ಖರ್ಚು ಮಾಡಲು ಅವಕಾಶವಿದೆ. ಸಭೆ, ಸಮಾರಂಭ, ಮೆರವಣಿಗೆ ನಡೆಸಲು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ದಢೇಸುಗೂರು, ಶಾಂತಿನಗರ, ಜವಳಗೇರಾ ಬಳಿ ಮೂರು ಚೆಕ್ ಪೋಸ್ಟ್ ಮಾಡಲಾಗಿದೆ. ಜವಳಗೇರಾ ಬಳಿ ಶುಕ್ರವಾರ ರಾತ್ರಿ ರೂ.೫ ಲಕ್ಷ ದಾಖಲೆ ಇಲ್ಲದೆ ಹಣ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ಮಂಜುನಾಥ ಗುಂಡೂರು, ಲಕ್ಷ್ಮಿದೇವಿ ಇದ್ದರು.