ಮತದಾನವು ಪ್ರಜಾಪ್ರಭುತ್ವದ ಹಬ್ಬ


ಚನ್ನಮ್ಮನ ಕಿತ್ತೂರ,ಏ.5: ಸಂಪ್ರದಾಯಗಳಂತೆ ಹಬ್ಬಗಳನ್ನು ಕುಟುಂಬ ಸಮೇತ ಆಚರಣೆ ಮಾಡುತ್ತೇವೆ. ಅದೇ ನಿಟ್ಟಿನಲ್ಲಿ ಮೇ. 7 ರಂದು ಲೋಕ ಸಭೆ ಚುನಾವಣೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಬೇಕೆಂದು ಪಿಡಿಓ ಜಯರಾಂ ಕಾದ್ರೋಳ್ಳಿ ಮತದಾರರಿಗೆ ಹೇಳಿದರು.
ತಾಲೂಕಿನ ಬೈಲೂರ ಗ್ರಾಪಂ ನಿಷ್ಕಲ ಮಂಟಪದಲ್ಲಿ ಮದುವೆ ಸಮಾರಂಭದಲ್ಲಿ ಜಿಪಂ, ಕಿತ್ತೂರ ತಾಪಂ, ಹಾಗೂ ಗ್ರಾಪಂ ಸಯೋಗದಲ್ಲಿ ಮತದಾರ ನೊಂದಣಿ ಹಾಗೂ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಲ್ಲಿ ಮಾತನಾಡಿದÀರು. ಮತ ಚಲಾಯಿಸುವುದು ಎಲ್ಲರ ಹಕ್ಕು ತಪ್ಪದೇ ಮತ ಚಲಾಯಿಸಿ ಯಾರು ಹೊರಉಳಿಯಬಾರದು. ಪ್ರಭುದ್ಧ ದೇಶ ನಿರ್ಮಾಣ ಮಾಡುವಲ್ಲಿ ನಿಮ್ಮ-ನಮ್ಮೇಲ್ಲರ ಪಾತ್ರ ಬಹಳ ಮುಖ್ಯ. ಅದಕ್ಕಾಗಿ ಮತದಾನವು ಪ್ರಜಾಪಭುತ್ವದ ಹಬ್ಬವಾಗಿದೆ ಎಂದರು.
ನವ ದಂಪತಿ ಜಿನಗೌಡ-ಪೂರ್ವಿ ಪಾಟೀಲ ಸೇರಿ ಮದುವೆ ಸಮಾರಂಭದಲ್ಲಿ ಎಲ್ಲರಿಗೂ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜೀಯವರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಬಸವರಾಜ ಸ್ವಾಮಿಜೀ, ಶರಣೆ ಚಂದ್ರಮ್ಮಾ ತಾಯಿ, ಗ್ರಂಥ ಮೇಲ್ವಿಚಾರಕ ಜಗದೀಶ ಅಂಗಡಿ, ಗ್ರಾಪಂ ಕ್ಲರ್ಕ ಶಶಿಧರ ಗನಲಾಟಿ, ರವಿ ಅಗ್ನಿಹೋತ್ರಿ, ರಾಚಯ್ಯಾ ಕೆಂಜಡಿಮಠ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸರ್ವ ಸದಸ್ಯರು, ಗ್ರಾಪಂ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿದ್ದರು.