ಚುನಾವಣೆ ಸಾಮಾಗ್ರಿ ಸಂಗ್ರಹದ ಶಂಕೆಜನತಾ ಬಜಾರ್ ಅಧ್ಯಕ್ಷರ ಮನೆ  ಪರಿಶೀಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,2- ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು. ಪ್ರಸಕ್ತ ಚುನಾವಣೆಯಲ್ಲಿ ಮತದಾರರಿಗೆ ಅಮಿಷ ಒಡ್ಡಲು.  ಹಣ ಸಾಮಾಗ್ರಿ ಇಟ್ಟಿದ್ದಾರೆಂದು ನಿನ್ನೆ ಸಂಜೆ. ಇಲ್ಲಿನ ಬಸವೇಶ್ವರ ನಗರದಲ್ಲಿರುವ ಜನತಾ ಬಜಾರ್ ನ ಅಧ್ಯಕ್ಷ ಜಿ.ನೀಲಕಂಠಪ್ಪ ಅವರ ಮನೆಯನ್ನು ಚುನಾವಣಾ ಅಕ್ರಮಗಳ ಪತ್ತೆ ತಂಡ ದಾಳಿ ನಡೆಸಿತ್ತು.
ಕಳೆದ ಭಾನುವಾರ ಮತ್ತು ಬುಧವಾರ ಎರೆಡು ದಿನಗಳ ಕಾಲ ಶಾಸಕ ಸೋಮಶೇಖರ ರೆಡ್ಡಿ ಅವರು ನೀಲಕಂಠಪ್ಪ ಅವರ ಮನೆಗೆ ಬಂದು ಹೋಗಿದ್ದರಂತೆ.
ಭಾನುವಾರ ಪ್ರಚಾರಕ್ಕೆ ಬಂದಾಗ. ಭುಧವಾರ ನೀಲಕಂಠಪ್ಪ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ನೋಡಲು ಬಂದು ಕೆಲಹೊತ್ತು ಇದ್ದು ಹೋಗಿದ್ದರಂತೆ.
ಇದನ್ನೇ ಎದುರಾಳಿಗಳು ಸೋಮಶೇಖರ ರೆಡ್ಡಿ ಅವರ ಬೆಂಬಲಿಗ ನೀಲಕಂಠ ಅವರ ಮನೆಯಲ್ಲಿ ಮತದಾರರಿಗೆ ಅಮಿಷ ಒಡ್ಡಲು ಸಾಮಾಗ್ರಿ, ಹಣ ಇಟ್ಟಿದ್ದಾರೆಂದು ಜಿಲ್ಲಾ ಆಡಳಿತಕ್ಕೆ ದೂರು ನೀಡಿದ್ದರಿಂದ. ನಿನ್ನೆ, ಆದಾಯ, ವಾಣಿಜ್ಯ, ಪೊಲೀಸ್, ಕಂದಾಯ ಮೊದಲಾದ ಇಲಾಖೆಗಳ ಸಿಬ್ಬಂದಿಗಳ ತಂಡ ದಾಳಿ ನಡೆಸಿ. ಮನ್ನೆಯನ್ನೆಲ್ಲಾ ಜಾಲಾಡಿ ಏನೂ ದೊರೆಯದೆ ವಾಪಸ್ಸು ಹೋಗಿದ್ದಾರಂತೆ.
ಯಾರೋ ತಪ್ಪು ಮಾಹಿತಿ ನೀಡಿ ಹೀಗೆ ಮಾಡಿಸಿದ್ದಾರೆಂದು ನೀಲಕಂಠಪ್ಪ ಹೇಳಿದ್ದಾರೆ.

One attachment • Scanned by Gmail