ಚುನಾವಣೆ ಸಮಸ್ಯೆಗಳು ಇದ್ದರೆ ಅಧಿಕಾರಿಗಳು ತಿಳಿದುಕೊಳ್ಳಿ:ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್

ಕಲಬುರಗಿ:ಫೆ.22: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಚುನಾವಣಾ ಕರ್ತವ್ಯ ನಿರ್ವಹಣೆಗೆ ನೋಡಲ್ ಆಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ. ಯಾವುದೇ ಅಧಿಕಾರಿಗಳು ಚುನಾವಣೆಗಳ ಸಮಸ್ಯೆಗಳು ಇದ್ದರೆ ಅಧಿಕಾರಿಗಳು ತಿಳಿದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಗುರುವಾರದಂದು ಕಲಬುರಗಿ ಎಸ್ ಎಮ್ ಪಂಡಿತ ರಂಗಮಂದಿರಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಇವರ ವತಿಯಿಂದ 2024ರ ಲೋೀಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ “ಸಂಶಯ ನಿವಾರಣೆ” ಅಧಿವೇಶನ ತರಬೇತಿ ( One day training and doubt clearing session ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ನಿವೆಲ್ಲರೂ ಒಂದು ತಂಡದ ಹಾಗೆ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.
ಲೋಕಸಭೆಯ ಕಲಬುರಗಿ ಮತಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಡೆಸಲು ವಿವಿಧ ವಿಭಾಗಗಳಿಂದ ಜಿಲ್ಲೆಯ ಹಿರಿಯ ಅಧಿಕಾರಿಗಳು ನೋಡಲ್ ಅಧಿಕಾರಿಗಳು ಚುನಾವಣೆ ತರಬೇತಿ ಹಾಜರಾಗಿದ್ದೀರಿ ಎಂದು ತಿಳಿಸಿದರು.
ಎಫ್‍ಎಸ್‍ಟಿ, ಎಸ್‍ಎಸ್‍ಟಿ ಹಾಗೂ ಇತರ ತಂಡಗಳ ಮಧ್ಯ ಪರಸ್ಪರ ಸಮನ್ವಯ ಸಂವಹನ ಇರಬೇಕು ಚುನಾವಣಾ ಕಾರ್ಯಗಳನ್ನು ಗಂಭೀರ ಪರಿಗಣಿಸಿ ಮಾಡಬೇಕು. ಕಣ್‍ತಪ್ಪಿನಿಂದಲೂ ಸಹ ಯಾವುದೇ ಚುನಾವಣಾ ಕರ್ತವ್ಯ ಲೋಪವಾಗದಂತೆ ಕ್ರಮವಹಿಸಬೇಕೆಂದು ಹೇಳಿದರು.
ಮುಂಚಿತವಾಗಿ ತರಬೇತಿ ನೀಡಲಾಗಿದೆ ಯಾವಾಗ ನೀತಿ ಸಂಹಿತೆ ಜಾರಿಯಾಗುತ್ತಿದೆ ಗೊತ್ತಿಲ್ಲ. ನಾವೆಲ್ಲರೂ ಒಗ್ಗಟಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ ಯಾವುದೇ ತರಹದ ಘಟನೆ ಆಗಬಾರದು ಚುನಾವಣೆ ನಡೆಸೋಣ ಎಂದರು.
ಎಲ್ಲಾ ಇಲಾಖೆಗಳ ಜವಬ್ದಾರಿಯಿಂದ ಕೆಲಸ ನಿರ್ವಸಿಬೇಕು ತಂಡಗಳು ತಮಗೆ ನೇಮಿಸದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಕಲಬುರಗಿಯಲ್ಲಿ ಯಾವುದೇ ತರಹದ ಘಟನೆಯನ್ನ ನಡೆಯದ ಹಾಗೆ ಯಶಸ್ವಿಯಾಗಿ ಚುನಾವಣೆ ನಡೆಸೋಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದೆ ಲೋಕಸಭಾ ಚುನಾವಣೆ 75 ಪ್ರತಿಶತ ತರಬೇಕು. ಅಧಿಕಾರಿಗಳು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಜಾಸ್ತಿ ತಾಲೂಕು ಜಾಗೃತಿ ಮೂಡಿಸುವ ಕೆಲಸಗಳನ್ನು ಆಗಬೇಕೆಂದರು.
ಪೋಲಿಸ್ ಆಯುಕ್ತರಾದ ಚೇತನ್ ಆರ್ ಅವರು ಮಾತನಾಡಿ ಪೊಲೀಸ ಇಲಾಖೆ ಪ್ರತ್ಯೇಕವಾದಂತಹ ಇಲಾಖೆಯಾಗಿದೆ ಸಣ್ಣ ಲೋಪದೋಷಗಳು ಇದ್ದರು ಚುನಾವಣಾ ಆಯೋಗವು ಪೊಲೀಸ ಇಲಾಖೆ ಮೇಲೆ ಆರೋಪ ಮಾಡುತ್ತೆ. ಚುನಾವಣೆಯಲ್ಲಿ ನೀತಿ ಸಂಹಿತೆ ಪ್ರಮುಖವಾಗಿರುತ್ತದೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕಾಗುತ್ತದೆ ನಿಮಗೆ ಕಾನೂನಿನ ಜ್ಞಾನ ಬಹಳ ಮುಖ್ಯ ನಿಮಗೆ ಏನಾದರೂ ಸಂಶಯ ಇದ್ದರೆ ಕೇಳಿ ಎಂದರು. ಚುನಾವಣೆ ಆಯೋಗ ಕಾಲಕಾಲಕ್ಕೆ ಮಾಹಿತಿಯನ್ನ ನೀಡುತ್ತದೆ. ನಿರ್ಧಾರ ತೆಗೆದುಕೊಳ್ಳುವದಕ್ಕಿಂತ ಮುಂಚೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಯಾವುದೇ ಸಣ್ಣ ಲೋಪದೋಷ ಆಗದ ಹಾಗೆ ಕೆಲಸ ನಿರ್ವಹಿಸಲು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಕೈ ಅಕ್ಷಯ್ ಮಚೇಂದ್ರ ಮಾತನಾಡಿ, ನೀತಿ ಸಂಹಿತೆ ಜಾರಿ ಬಂದನಂತರ ಎಲ್ಲಾ ತಂಡಗಳು ತಮಗೆ ನಿರ್ವಹಿಸಿದ ಕೆಲಸಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದರು ಯಾವುದೇ ಸಮಸ್ಯೆಗಳು ಇದ್ದರೆ ಪರಿಹರಿಸಲಾಗುವುದು ಎಂದರು.
ಮಹಾನಗರ ಪಾಲಿಕೆ ಆಯುಕ್ತರು ಪಾಟೀಲ ಭುವನೇಶ ದೇವಿದಾಸ ಮಾತನಾಡಿದರು.ವಿಧಾನ ಸಭಾಕ್ಷೇತ್ರದ ಮಾಸ್ಟರ್ ಟ್ರೇನರ್ ಮಹಾಂತೇಶ್ ಸ್ವಾಮಿ ಪಿ.ಪಿ.ಟಿ. ಮೂಲಕ ತರಬೇತಿದಾರರಿಗೆ ಮಾಹಿತಿಯನ್ನು ನೀಡಿದರು.
ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ (ಜಾರಿ) ಸಿ.ಎಸ್. ನಾರಾಯಣ್, ಅಬಕಾರಿ ಉಪ-ಆಯುಕ್ತರಾದ ಸೈಯದ್ ಅಜ್ಮತ್ ಅಫ್ರೀನ್ ಕಲಬುರಗಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಸಣ್ಣ ನೀರಾವರಿ ಇಲಾಖೆ ಡಿ.ಎಂ.ಪಾಣಿ ಸೇರಿದಂತೆ ನೋಡಲ್ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.