ಚುನಾವಣೆ ಸಮರ್ಥವಾಗಿ ಕೆಲಸ ನಿರ್ವಹಿಸಿ – ಡಿಸಿ ಸಲಹೆ

ದೇವದುರ್ಗ,ಡಿ.೧೮-ಮತದಾನ ಸಂದರ್ಭದಲ್ಲಿ ಮತಯಂತ್ರ ಬಳಕೆ ಸೇರಿ ವಿವಿಧ ಕೆಲಸ ನಿರ್ವಹಿಸುವಾಗ ಗೊಂದಲಕ್ಕೆ ಒಳಗಾಗದೇ ನೀಡಿದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಪಟ್ಟಣದ ಡಾನ್‌ಬೋಸ್ಕೋ ಶಿಕ್ಷಣ ಸಂಸ್ಥೆಯಿಂದ ಗಾ.ಪಂ. ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಶುಕ್ರವಾರ ಮಾತನಾಡಿದರು. ಮತದಾನ ಯಂತ್ರಗಳ ಬಳಕೆ, ಮತದಾರರ ಗುರುತಿನ ಚೀಟಿ ಪರಿಶೀಲನೆ ಸೇರಿ ವಿವಿಧ ಕೆಲಸ ಮಾಡುವಾಗ ಗೊಂದಲಕ್ಕೆ ಒಳಗಾಗಬಾರದು. ಯಾವುದೇ ರೀತಿಯ ಅನುಮಾನಗಳಿದ್ದರೆ, ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆಯಬೇಕು ಎಂದು ಹೇಳಿದರು.
ನಂತರ ಮಾಸ್ಟರ್ ಟ್ರೇನರ್‌ಗಳಾದ ಡಾ.ಶುಭಾಶ್ಚಂದ್ರ ಪಾಟೀಲ್, ಜೆ.ಹನುಮಂತ, ಪ್ರಶಾಂತ, ಶಿವರಾಜ, ಅಜೀಜ್ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ೨೯೭ ಪಿಆರ್‌ಒ ಹಾಗೂ ಎಪಿಆರ್‌ಒ ಸಿಬ್ಬಂದಿಗಳು ಭಾಗವಹಿಸಿದ್ದರು. ತಹಸೀಲ್ದಾರ್ ಮಧುರಾಜ್ ಯಾಳಗಿ, ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೋಟೋ೧೮ಡಿವಿಡಿ,೨