ಚುನಾವಣೆ: ವೀಕ್ಷಕರಿಂದ ಚುನಾವಣಾ ಕಾರ್ಯನಿರ್ವಹಣೆ, ಸಿದ್ದತೆಗಳ ಸಮಗ್ರ ಪರಿಶೀಲನೆ

ಚಾಮರಾಜನಗರ, ಏ.23:- ವಿಧಾನಸಭಾ ಚುನಾವಣೆಗೆ ನಿಯೋಜಿತರಾಗಿರುವ ವೀಕ್ಷಕರು ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧಕಾರ್ಯ ನಿರ್ವಹಣೆ ಹಾಗೂ ಸಿದ್ದತೆಗಳನ್ನು ಇಂದು ಸಮಗ್ರವಾಗಿ ಪರಿಶೀಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಅಭಿನವ್ ಚಂದ್ರ ಹಾಗೂ ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಭೂಪೇಂದ್ರ. ಎಸ್. ಚೌಧರಿ ಹಾಗೂ ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರದ ವೆಚ್ಚ ವೀಕ್ಷಕರಾದ ಹಿಮಾಮ್ಷು ಪಿ. ಜೋಷಿ, ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಅನಿಲ್ ಗಾಂಧಿ ಮತ್ತು ಪೊಲೀಸ್ ವೀಕ್ಷಕರಾದ ಠಾಕೂರ್‍ಥಾಪ ಅವರು ಜಿಲ್ಲೆಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ನಿರ್ವಹಿಸಲಾಗುತ್ತಿರುವ ಕಾರ್ಯನಿರ್ವಹಣೆ ಹಾಗೂ ಸಿದ್ದತೆಗಳನ್ನು ಪರಿಶೀಲನೆ ಮಾಡಿದರು.
ಮತಗಟ್ಟೆಗಳಲ್ಲಿ ಕಲ್ಪಿಸಿರುವ ಸೌಕರ್ಯಗಳ ಬಗ್ಗೆ ವಿವರ ಪಡೆದ ವೀಕ್ಷಕರು ಪ್ರತಿ ಮತಗಟ್ಟೆಯಲ್ಲಿ ಶುದ್ದಕುಡಿಯುವ ನೀರು, ವಿದ್ಯುತ್, ಶೌಚಾಲಯ, ವಿಶೇಷ ಚೇತನರಿಗೆ ರ್ಯಾಂಪ್ ಸೇರಿದಂತೆ ಇತರೆ ಅಗತ್ಯಗಳನ್ನು ಕಡ್ಡಯವಾಗಿ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳು ಮತ್ತೊಮ್ಮೆ ವಿವರವಾಗಿ ಪರಿಶೀಲಿಸಿ ಸೌಕರ್ಯಗಳು ಸಮರ್ಪಕವಾಗಿ ಇರುವ ಬಗ್ಗೆ ಖಾತರಿ ಪಡಿಸಿಕೊಂಡಿರಬೇಕು ಎಂದು ವೀಕ್ಷಕರು ಸೂಚನೆ ನೀಡಿದರು.
ಮತಗಟ್ಟೆಗಳಿಗೆ ನೇಮಕವಾಗಿರುವ ಪಿಆರ್‍ಒ, ಎಪಿಆರ್‍ಒ, ಇತರೆ ಸಿಬ್ಬಂದಿಯ ಮಾಹಿತಿ ಪಡೆದ ವೀಕ್ಷಕರು ಸಂಬಂಧಿಸಿದವರಿಗೆ ಉಳಿದ ಹಂತದತರಬೇತಿ ನೀಡಬೇಕು. ಮತಗಟ್ಟೆಗಳಿಗೆ ತೆರಳುವ ಮಾರ್ಗಗಳ ರೂಪುರೇಷೆಯೋಜನೆ ಸಿದ್ದವಾಗಿಟ್ಟುಕೊಳ್ಳಬೇಕು. ಕಾಡಂಚಿನಗ್ರಾಮದ ವ್ಯಾಪ್ತಿಯ ಮತಗಟ್ಟೆಗಳಿಗೆ ಅಗತ್ಯವಾಗಿರುವ ಸಂಪರ್ಕ ಸಾಧನಗಳು ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಚಾಚು ತಪ್ಪದೇ ವಹಿಸಬೇಕು ಎಂದುಚುನಾವಣಾ ವೀಕ್ಷಕರು ನಿರ್ದೇಶನ ನೀಡಿದರು.
ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸೂಕ್ಷ್ಮ, ಅತಿ ಸೂಕ್ಷ ಮತಗಟ್ಟೆಗಳೆಂದು ಗುರುತಿಸಲಾಗಿರುವ ಕಡೆ ವಿಶೇಷವಾಗಿ ನಿಗಾ ವಹಿಸಬೇಕು. ಮತಗಟ್ಟೆ ಸೇರಿದಂತೆ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಭಾಗಗಳಲ್ಲಿ ಅಗತ್ಯಕ್ಕೆಅನುಗುಣವಾಗಿ ಪೊಲೀಸ್ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದರು.
ಚುನಾವಣೆಗೆ ಅವಶ್ಯಕ್ಕೆತಕ್ಕಂತೆ ವಾಹನಗಳ ನಿಯೋಜನೆಯಾಗಬೇಕು. ಮತಗಟ್ಟೆ ಅಧಿಕಾರಿ ಸಿಬ್ಬಂದಿಗೂ ಸೇರಿದಂತೆಚುನಾವಣಾ ಸÀಂದರ್ಭಗಳಲ್ಲಿ ಪೂರಕವಾಗಿರುವ ವಾಹನಗಳನ್ನು ಒದಗಿಸಬೇಕು. ಹೆಚ್ಚುವರಿ ವಾಹನಗಳನ್ನು ಮುಂಜಾಗ್ರತಾಕ್ರಮವಾಗಿಇಟ್ಟುಕೊಂಡಿರಬೇಕು. ವಾಹನಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಿ ದೃಢೀಕರಿಸಿಕೊಳ್ಳಬೇಕು. ವಾಹನ ನಿಯೋಜನೆ ಸಂಬಂಧ ಕೈಗೊಳ್ಳಲಾಗಿರುವ ಸಮಗ್ರ ರೂಪುರೇಷೆ ಯೋಜನೆ ಸಿದ್ದತೆ ಕುರಿತ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ನೀಡುವಂತೆ ವೀಕ್ಷಕರು ಸೂಚನೆ ನೀಡಿದರು.
ಮತದಾರರ ಜಾಗೃತಿ (ಸ್ವೀಪ್) ಚಟುವಟಿಕೆಗಳು, ಅಂಚೆ ಮತ ಮತದಾನ ಸೌಲಭ್ಯ, ಮತಗಟ್ಟೆಗೆ ಬೇಕಿರುವ ಸಾಮಾಗ್ರಿಗಳ ಪೂರೈಕೆ, ವಿಧಾನಸಭಾ ಕ್ಷೇತ್ರವಾರು ಚುನಾವಣಾ ಅಧಿಕಾರಿಗಳ ಕಾರ್ಯನಿರ್ವಹಣೆ, ಚುನಾವಣಾ ಸಂಬಂಧಿ ಇನ್ನಿತರ ಸಿದ್ದತೆ ಹಾಗೂ ಅಗತ್ಯಕರ್ತವ್ಯ ಪೂರೈಸುವ ಕುರಿತು ಚುನಾವಣಾ ವೀಕ್ಷಕರು ವಿವರವಾಗಿ ಪರಾಮರ್ಶೆ ನಡೆಸಿದರು.
ಚುನಾವಣಾ ಕಾರ್ಯವನ್ನು ಅತ್ಯಂತಗಂಭೀರವಾಗಿ ಹಾಗೂ ಹೊಣೆಗಾರಿಕೆಯಿಂದ ಅಧಿಕಾರಿಗಳು ನಿರ್ವಹಿಸಬೇಕು. ಎಲ್ಲಿಯೂ ಲೋಪಗಳಿಗೆ ಅವಕಾಶವಾಗಬಾರದು. ಸಮರ್ಪಕವಾಗಿ ವಹಿಸಲಾಗಿರುವ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಚುನಾವಣಾ ವೀಕ್ಷಕರು ಸೂಚಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಚುನಾವಣಾ ಸಂಬಂಧಕೈಗೊಂಡಿರುವ ಸಿದ್ದತೆಗಳು ಹಾಗೂ ನಿರ್ವಹಿಸಲಾಗುತ್ತಿರುವ ಕಾರ್ಯಗಳ ಸಂಬಂಧ ವಿವರಿಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಗೀತಾ ಹುಡೇದ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಬಿ. ಮಲ್ಲಿಕಾರ್ಜುನ್, ಹನೂರು ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರಾದ ಕೆ. ಮಧುಸೂದನ್, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ತಹಶೀಲ್ದಾರರಾದ ಐ.ಈ. ಬಸವರಾಜು, ಎಂ. ಮಂಜುಳ, ಕೆ.ವೈ. ಗುರುಪ್ರಸಾದ್, ಮಲ್ಲಿಕಾರ್ಜುನ್, ಅಬಕಾರಿ ಉಪ ಆಯುಕ್ತರಾದ ನಾಗಶಯನ, ನೋಡಲ್ ಅಧಿಕಾರಿಗಳಾಗಿರುವ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.