ಚುನಾವಣೆ ಯಶಸ್ವಿ: ಜಿಲ್ಲಾಡಳಿತ ಕೃತಜ್ಞತೆ

ಗದಗ, ಮೇ. 16: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಯು ಗದಗÀ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಮತ್ತು ಶಾಂತಯುತವಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರ ಸಹಕಾರ ಮತ್ತು ಶ್ರಮಕ್ಕೆ ಗದಗÀ ಜಿಲ್ಲಾಡಳಿತವು ಕೃತಜ್ಞತೆ ಸಲ್ಲಿಸುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ವೈಶಾಲಿ ಎಂ.ಎಲ್. ಅವರು ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಮೇ.10 ರಂದು ಶಾಂತಿಯುತ ಮತದಾನ ನಡೆದು ಶೇ.75.61 ರಷ್ಟು ಮತದಾನವಾಗಿದೆ. ಮತ ಎಣಿಕೆಯ ಎಲ್ಲ ಪ್ರಕ್ರಿಯೆಗಳು ಸಹ ಸುಗಮವಾಗಿ ನಡೆದು ಮೇ 13 ರಂದು ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ವೇಳಾ ಪಟ್ಟಿಯಂತೆ ಮಾರ್ಚ 29 ರಂದು ನೀತಿ ಸಂಹಿತೆ ಜಾರಿಯಿಂದ ಆರಂಭಗೊಂಡು ಸುಧೀರ್ಘ 45 ದಿನಗಳ ಕಾಲ ನಿರಂತರವಾಗಿ ಒಂದಾದ ಮೇಲೊಂದರಂತೆ ಎಲ್ಲಾ ಪ್ರಕ್ರಿಯೆಗಳು ಯಾವುದೇ ಗೊಂದಲವಿಲ್ಲದೇ ಸುಗಮವಾಗಿ ನಡೆದು ಚುನಾವಣೆಯು ಶಾಂತ ರೀತಿಯಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಕಾರಣೀಕರ್ತರಾದ ಗದಗ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಚುನಾವಣಾ ಏಜೆಂಟರುಗಳು, ಅಭ್ಯರ್ಥಿಗಳ ಸಹಕಾರವನ್ನು ಜಿಲ್ಲಾಡಳಿತವು ಸ್ಮರಿಸುತ್ತದೆ.
ಚುನಾವಣೆ ಪ್ರಕ್ರಿಯೆ ಆರಂಭದಿಂದ ಮುಕ್ತಾಯದವರೆಗಿನ ಅನೇಕ ಚಟುವಟಿಕೆಗಳು ಹಾಗೂ ಮತದಾನ ಜಾಗೃತಿಯ ಕಾರ್ಯಕ್ರಮಗಳ ವರದಿ ಮತ್ತು ಮತದಾನ ಹಾಗೂ ಮತ ಎಣಿಕೆಯ ಫಲಿತಾಂಶ ಪ್ರಕಟಣೆ ಸೇರಿದಂತೆ ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಯಶಸ್ಸಿಗೆ ಗದಗ ಜಿಲ್ಲಾ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳ ಸಹಕಾರಕ್ಕೆ ಸಹ ಜಿಲ್ಲಾಡಳಿತ ಆಭಾರಿಯಾಗಿದೆ.
ಚುನಾವಣಾ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಶಾಂತಯುತವಾಗಿ ನಡೆಸಲು ಶ್ರಮಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಪೆÇಲೀಸ್ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ಹಾಗೂ ಕೇಂದ್ರ ಭದ್ರತಾ ಪಡೆಗಳಿಗೂ ಅಭಿನಂದನೆಗಳು. ಜಿಲ್ಲಾ ಸ್ವೀಪ್ ಸಮಿತಿಯ ಸರ್ವರಿಗೂ ಧನ್ಯವಾದ ಎಂದು ಅವರು ಹೇಳಿದ್ದಾರೆ.
ಈ ವಿಧಾನಸಭಾ ಚುನಾವಣೆಯ ಸಿದ್ಧತಾ ಕಾರ್ಯಗಳು ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಪೂರ್ವ ಸುಮಾರು ದಿನಗಳಿಂದಲೇ ಆರಂಭಗೊಂಡಿವೆ. ಅತ್ಯಂತ ಸೂಕ್ಷ್ಮ ಹಾಗೂ ನಿಯಮಿತವಾಗಿ ನಡೆಯಬೇಕಾದ ಈ ಚುನಾವಣೆಯು ಯಶಸ್ವಿಗೆ ಅನೇಕ ಅಧಿಕಾರಿಗಳು ಸಿಬ್ಬಂದಿ ಶ್ರಮಿಸಿದ್ದಾರೆ. 4 ವಿಧಾನಸಭಾ ಕ್ಷೇತ್ರಗಳ ಕ್ಷೇತ್ರ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಲ್ಲಾ ಏಳು ತಾಲೂಕುಗಳು ಕಚೇರಿ, ತಾಲೂಕು ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಸಿಬ್ಬಂದಿ, ವಿವಿಧ ವಿಷಯಗಳ ನೋಡಲ್ ಅಧಿಕಾರಿಗಳು ಮತ್ತು ಅವರ ತಂಡಗಳ ಸದಸ್ಯರು, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿ, ವೀಕ್ಷಕರುಗಳಿಗೆ, ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಎಂ.ಎಂ.ಸಿ ತಂಡ, ಸಹಾಯವಾಣಿ ಕೇಂದ್ರ, ದೂರು ನಿರ್ವಹಣಾ ಕೋಶ, ಕಂಟ್ರೋಲ ರೂಂ, ವೆಚ್ಚ ನಿರ್ವಹಣಾ ಸಮಿತಿ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೂ ಸಹ ಜಿಲ್ಲಾಡಳಿತವು ಧನ್ಯವಾದ ಸಲ್ಲಿಸುತ್ತದೆ.
ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ತಂಡಗಳಾದ ಫ್ಲೆಯಿಂಗ್ ಸ್ಕ್ವಾಡ್, ಚೆಕ್ ಪೋಸ್ಟ್, ವಿಡಿಯೋ ಸರ್ವಲೆನ್ಸ್ ತಂಡಗಳ ಸದಸ್ಯರ ಕಾರ್ಯ ಮೆಚ್ಚುಗೆಯಾಗಿದೆ. ಒಟ್ಟಾರೆ ಚುನಾವಣೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಜಿಲ್ಲಾಡಳಿತದಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.